ಅಮೆರಿಕದಲ್ಲಿ ಕೊರೊನಾ ಸಂಬಂಧಿತ ಸಾವು ಲಕ್ಷ ದಾಟಲ್ಲ: ಡೊನಾಲ್ಡ್ ಟ್ರಂಪ್ ಭರವಸೆಅಮೆರಿಕದಲ್ಲಿ ಕೊರೊನಾ ಸೋಂಕು ಸಂಬಂಧಿತ ಸಾವು ಒಂದು ಲಕ್ಷದೊಳಗಿರಲಿದೆ ಎಂದು ಅಂದಾಜಿಸಲಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಟೀಕೆ ಬೆನ್ನಲ್ಲೇ ಮಹಾಮಾರಿ ಕೊರೋನಾ ನಿಭಾಯಿಸಿದ್ದಕ್ಕಾಗಿ ಚೀನಾವನ್ನು ಪ್ರಶಂಸಿಸಿದ ವಿಶ್ವ ಆರೋಗ್ಯ ಸಂಸ್ಥೆ!ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ) ಚೀನಾದ ಪಿಆರ್ಏಜೆನ್ಸಿ(ಸಾರ್ವಜನಿಕ ಸಂಪರ್ಕ ಸಂಸ್ಥೆ) ಮಾದರಿ ಕಾರ್ಯನಿರ್ವಹಿಸುತ್ತಿದೆ. ಅದಕ್ಕೆ ನಾಚಿಕೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಬೆನ್ನಲ್ಲೇ ಕೊರೋನಾ ನಿಭಾಯಿಸಿದ್ದಕ್ಕಾಗಿ ಚೀನಾವನ್ನು ಡಬ್ಲ್ಯೂಎಚ್ಒ ಪ್ರಶಂಸಿಸಿದೆ.
ವಿಶ್ವದೆಲ್ಲೆಡೆ ಕೊರೋನಾ ಆರ್ಭಟ: ಮಹಾಮಾರಿಗೆ 2.33 ಲಕ್ಷ ಮಂದಿ ಸಾವು, ಸೋಂಕಿತರ ಸಂಖ್ಯೆ 32.76 ಲಕ್ಷಕ್ಕೆ ಏರಿಕೆವಿಶ್ವದಾದ್ಯಂತ ಕೊರೋನಾ ಆರ್ಭಟ ಹೆಚ್ಚಾಗುತ್ತಲೇ ಇದ್ದು, ಮಹಾಮಾರಿ ವೈರಸ್'ಗೆ ಈ ವರೆಗೂ 2.33 ಲಕ್ಷ ಮಂದಿ ಬಲಿಯಾಗಿದ್ದಾರೆ. ಅಲ್ಲದೆ, ಸೋಂಕಿತರ ಸಂಖ್ಯೆ 32.76 ಲಕ್ಷಕ್ಕೆ ಏರಿಕೆಯಾಗಿದೆ.
ಮಹಾಮಾರಿ ಕೊರೋನಾಗೆ ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 1,883 ಮಂದಿ ಸಾವುಅಮೆರಿಕದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾ ವೈರಸ್ ಮಹಾಮಾರಿಗೆ 1,883 ಮಂದಿ ಬಲಿಯಾಗಿದ್ದಾರೆಂದು ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಕೊರೊನವೈರಸ್ ಸಂಪನ್ಮೂಲ ಕೇಂದ್ರದ ಮಾಹಿತಿ ಶನಿವಾರ ತಿಳಿಸಿದೆ.
ಪತ್ರಿಕೆ ವಿರುದ್ಧ ಮೊಕದ್ದಮೆ: ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಗೆ ಕೋರ್ಟ್ ನಲ್ಲಿ ಮೊದಲ ಸುತ್ತಿನಲ್ಲಿ ಸೋಲುತನ್ನಪರಿತ್ಯಕ್ತ ತಂದೆಗೆ ಬರೆದ ಪತ್ರದ ಆಯ್ದ ಭಾಗಗಳನ್ನು ಹೊರಹಾಕಿದ ಬ್ರಿಟಿಷ್ ಪತ್ರಿಕೆಯ ಮಾಲಿಕರ ವಿರುದ್ಧ ಲಂಡನ್ ಕೋರ್ಟ್ ನಲ್ಲಿ ಮೊಕದ್ದಮೆ ಹೂಡಿದ್ದ ಬ್ರಿಟನ್ ಯುವರಾಣಿ ಮೇಘನ್ ಮಾರ್ಕೆಲ್ ಗೆ ಮೊದಲ ಸುತ್ತಿನಲ್ಲಿ ಸೋಲು ಕಂಡಿದೆ. ನ್ಯಾಯಾಧೀಶರು ಅವರ ಮೊಕದ್ದಮೆಯ ಭಾಗವನ್ನು ವಜಾಗೊಳಿಸಿದ್ದಾರೆ.
ಊಹಾಪೋಹಾಗಳಿಗೆ ತೆರೆ: ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಿಮ್ ಜಾಂಗ್ ಉನ್ ಪ್ರತ್ಯಕ್ಷ!ಕಳೆದ 20 ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಹಲವು ಊಹಾ ಪೋಹಗಳಿಗೆ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್ ಉನ್ ತೆರೆ ಎಳೆದಿದ್ದಾರೆ.
ಕೊರೋನಾ ಲಾಕ್ ಡೌನ್ ಫಜೀತಿ: ಲೈವ್ ರಿಪೋರ್ಟಿಂಗ್ ವೇಳೆ ಯುವತಿ ಅರೆನಗ್ನ ಓಡಾಟ, ವಿಡಿಯೋ ವೈರಲ್!ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ವರದಿಗಾರನೊಬ್ಬ ಮನೆಯಲ್ಲೇ ಕುಳಿತು ಲೈವ್ ವರದಿ ಮಾಡುವಾಗ ಹಿಂಬದಿಯಲ್ಲಿ ಯುವತಿಯೋರ್ವಳು ಅರೆನಗ್ನವಾಗಿ ಹಾದು ಹೋಗಿದ್ದು ಇದರಿಂದ ವರದಿಗಾರನ ಅನೈತಿಕ ಸಂಬಂಧ ಸಾರ್ವಜನಿಕವಾಗಿ ಬಯಲಾದಂತಾಗಿದೆ.
ಕೊರೋನಾ ವೈರಸ್ ವುಹಾನ್ ಲ್ಯಾಬ್ ನಲ್ಲಿಯೇ ಹುಟ್ಟಿಕೊಂಡಿದೆ: ಡೊನಾಲ್ಡ್ ಟ್ರಂಪ್ಜಗತ್ತಿನಾದ್ಯಂತ 2,30,000 ಮಂದಿಯನ್ನು ಬಲಿ ಪಡೆದಿರುವ ಮಹಾಮಾರಿ ಕೊರೋನಾ ವೈರಸ್ ಚೀನಾದ ವುಹಾನ್ ಲ್ಯಾಬ್ ನಿಂದಲೇ ಜಗತ್ತಿಗೆ ವ್ಯಾಪಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆರೋಪಿಸಿದ್ದಾರೆ.
ಕಿಮ್ ಜಾಂಗ್ ಉನ್ ಏಲ್ಲಿ? ಸತತ 20ನೇ ದಿನವೂ ಸಾರ್ವಜನಿಕರ ಕಣ್ಣಿಗೆ ಬೀಳದ ಉತ್ತರ ಕೊರಿಯಾ ನಾಯಕ!ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಪರಿಸ್ಥಿತಿ ಹಾಗೂ ಅವರ ನಂತರ ಯಾರು ಪರಮಾಣು ಸಶಕ್ತ ರಾಷ್ಟ್ರವನ್ನು ಮುನ್ನಡೆಸಲಿದ್ದಾರೆ ಎಂಬುದರ ಬಗ್ಗೆ ಊಹಾಪೋಹಗಳು ಎದ್ದಿರುವಂತೆ ಸತತ 20ನೇ ದಿನವೂ ಅವರು ಸಾರ್ವಜನಿಕರ ಕಣ್ಣಿಗೆ ಬೀಳದಿರುವುದು ಸಾಕಷ್ಟು ಕೌತುಕ ಮೂಡಿಸಿದೆ.
ಲಾಕ್ ಡೌನ್ ಮಧ್ಯೆ ಯುಎಇಯಿಂದ ತಾಯ್ನಾಡಿಗೆ ಮರಳಲು ಸುಮಾರು 32 ಸಾವಿರ ಭಾರತೀಯರ ಹೆಸರು ನೋಂದಣಿ!ದೇಶದಲ್ಲಿ ವಲಸಿಗರ ಮರು ನೋಂದಣಿ ಅಭಿಯಾನವನ್ನು ಆರಂಭಿಸಿದ ಬಳಿಕ ಕೋವಿಡ್-19 ಸಾಂಕ್ರಾಮಿಕ ರೋಗದ ನಡುವೆ ತಾಯ್ನಾಡಿಗೆ ಮರಳಲು ಯುಎಇಯಿಂದ ಸುಮಾರು 32 ಸಾವಿರಕ್ಕೂ ಹೆಚ್ಚು ಜನರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ.
ಚೀನಾದ ಸಾರ್ವಜನಿಕ ಸಂಪರ್ಕ ಸಂಸ್ಥೆಯಂತೆ ವರ್ತಿಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆಗೆ ನಾಚಿಕೆಯಾಗಬೇಕು:ಡೊನಾಲ್ಡ್ ಟ್ರಂಪ್ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ವಾಗ್ದಾಳಿ ಮುಂದುವರಿಸಿದ್ದಾರೆ. ಅದು ಚೀನಾ ದೇಶದ ಸಾರ್ವಜನಿಕ ಸಂಪರ್ಕ ಸಂಸ್ಥೆಯ ರೀತಿ ವರ್ತಿಸುತ್ತಿದೆ, ಅದಕ್ಕೆ ನಾಚಿಕೆಯಾಗಬೇಕು ಎಂದು ಟೀಕಿಸಿದ್ದಾರೆ.
1918ರ ಸ್ಪ್ಯಾನಿಷ್ ಫ್ಲೂ ನಿಂದ ತಪ್ಪಿಸಿಕೊಂಡು, ಕ್ಯಾನ್ಸರ್ ಗೆದ್ದು, ಕೊರೋನಾಗೆ ಸೆಡ್ಡು ಹೊಡೆದ 101 ವರ್ಷದ ಅಜ್ಜಿ!ಸ್ಪ್ಯಾನಿಷ್ ಫ್ಲೂ ವೇಳೆ ಜನಿಸಿ ಅದರಿಂದ ಬಚಾವಾಗಿದ್ದ ನ್ಯೂಯಾರ್ಕ್ ಮಹಿಳೆ ಸದ್ಯ ಕೊರೋನಾವನ್ನು ಗೆದ್ದಿದ್ದಾಳೆ. ಲೇಕ್ ಮೊಹೆಗನ್ ನ ನರ್ಸಿಂಗ್ ಹೋಂನಲ್ಲಿ ವಾಸಿಸುವ ಏಂಜಲೀನಾ ಫ್ರೀಡ್ಮನ್ ಅವರನ್ನು ಮಾರ್ಚ್ 21 ರಂದು ಸಣ್ಣ ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪಾಕ್ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್, ಕುಟುಂಬಕ್ಕೂ ತಟ್ಟಿದ ಕೊರೋನಾಕೊರೋನಾ ವೈರಸ್ ಮಟ್ಟಹಾಕಲು ಪಾಕಿಸ್ತಾನ ಹೆಣಗಾಡುತ್ತಿದ್ದು, ಈ ನಡುವಲ್ಲೇ ಪಾಕಿಸ್ತಾನದ ಅಸೆಂಬ್ಲಿ ಸ್ಪೀಕರ್ ಅಸಾದ್ ಕೈಸರ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ವಿಶ್ವಕ್ಕೆ ಕೊರೋನಾಘಾತ: ಸಾವಿನ ಸಂಖ್ಯೆ 2.33 ಲಕ್ಷಕ್ಕೆ ಏರಿಕೆ, 33 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆವಿಶ್ವದೆಲ್ಲೆಡೆ ಕೊರೋನಾ ರಣಕೇಕೆ ಹಾಕುತ್ತಿದ್ದು, ಈ ವರೆಗೂ 2.33 ಲಕ್ಷ ಮಂದಿ ಮಹಾಮಾರಿ ವೈರಸ್'ಗೆ ಬಲಿಯಾಗಿದ್ದಾರೆ, ಅಲ್ಲದೆ ಸೋಂಕಿತರ ಸಂಖ್ಯೆ 33 ಲಕ್ಷಕ್ಕೇರಿಕೆಯಾಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್'ಗೂ ತಗುಲಿದ ಮಹಾಮಾರಿ ಕೊರೋನಾ!ಆಘಾತಕಾರಿ ಬೆಳವಣಿಗೆಯೊಂದರಲ್ಲಿ ರಷ್ಯಾದ ಪ್ರಧಾನಮಂತ್ರಿ ಮಿಖಾಯಿಲ್ ಮಿಶುಸ್ಟಿನ್'ಗೂ ಮಹಾಮಾರಿ ಕೊರೋನಾ ವೈರಸ್ ತಗುಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?