ಅಮೆರಿಕ: 10 ಲಕ್ಷ ಜನರಿಗೆ ಕೊರೋನ ಸೋಂಕು ಪರೀಕ್ಷೆ, 1,75,000ಮಂದಿಗೆ ಸೋಂಕು, ಚೀನಾ ಮೀರಿಸಿದ ಸಾವಿನ ಸಂಖ್ಯೆ!ಅಮೆರಿಕದಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸಾವಿನ ಸಂಖ್ಯೆಯಲ್ಲಿ ಅಮೆರಿಕ ಇದೀಗ ಚೀನಾವನ್ನೂ ಹಿಂದಿಕ್ಕಿದೆ ಎಂದು ತಿಳಿದುಬಂದಿದೆ.
ಚೀನಾ: ಕೊರೋನಾ ಪೀಡಿತರು ಗುಣವಾಗುತ್ತಿದ್ದಾರೆ ಎಂದುಕೊಳ್ಳುತ್ತಿರುವಾಗಲೇ ಬಯಲಾಯ್ತು ಹೊಸ ಅಘಾತಕಾರಿ ಅಂಶ!ಕೊರೋನಾ ವೈರಾಣು ಸೋಂಕಿತರು ಗುಣಮುಖರಾಗುತ್ತಿರುವ ಪ್ರಕರಣಗಳು ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭರವಸೆ ಮೂಡಿಸುತ್ತಿವೆ. ಆದರೆ ಚೀನಾದಲ್ಲಿ ಕೊರೋನಾಗೆ ಸಂಬಂಧಪಟ್ಟಂತೆ ಮತ್ತೊಂದು ಅಘಾತಕಾರಿ ಸುದ್ದಿ ಬಹಿರಂಗವಾಗಿದೆ.
ಅಮೆರಿಕದಲ್ಲಿ ಕೊರೋನಾಗೆ 3 ಸಾವಿರ ಮಂದಿ ಬಲಿ, 10 ಲಕ್ಷ ಜನರಿಗೆ ಸೋಂಕು ಪರೀಕ್ಷೆ: ಟ್ರಂಪ್ಅಮೆರಿಕದಲ್ಲಿ ಮಹಾಮಾರಿ ಕೊವಿಡ್-19ಗೆ 3 ಸಾವಿರ ಮಂದಿ ಬಲಿಯಾಗಿದ್ದು, 10 ಲಕ್ಷ ಜನರಿಗೆ ಕೊರೋನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಕೊರೋನಾದಿಂದಾಗಿ 11 ಮಿಲಿಯನ್ ಜನ ಬಡವರಾಗಲಿದ್ದಾರೆ: ವಿಶ್ವ ಬ್ಯಾಂಕ್"ಪೂರ್ವ ಏಷ್ಯಾ ಪೆಸಿಫಿಕ್ ದೇಶಗಳ 11 ದಶಲಕ್ಷ ಜನ ಬಡತನ ಅನುಭವಿಸಬಹುದು. ಕಡಿಮೆ ವೇತನದ ಕಾರಣ ಅಸಂಘಟಿತ ಕಾರ್ಮಿಕರು ರು ಹೆಚ್ಚು ದುರ್ಬಲರಾಗುವ ಸಾಧ್ಯತೆ ಇದೆ" ಕೊರೋನಾವೈರಸ್ ಹಿನ್ನೆಲೆಯಲ್ಲಿ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಆರ್ಥಿಕ ಪರಿಣಾಮದ ಬಗ್ಗೆ ವಿಶ್ವ ಬ್ಯಾಂಕ್ ವರದಿ ಮಾಡಿದೆ
8 ಲಕ್ಷ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ, 38,800 ಬಲಿ!ಚೀನಾವನ್ನು ಹಿಂಡಿ ಹಿಪ್ಪೆಕಾಯಿ ಮಾಡಿದ್ದ ಮಹಾಮಾರಿ ಕೊರೋನಾ ಇದೀಗ ಜಗತ್ತನ್ನೇ ಜಿಗಣೆಯಂತೆ ರಕ್ತ ಹಿರುತ್ತಿದ್ದು ಸೋಂಕಿತರ ಸಂಖ್ಯೆ 8 ಲಕ್ಷ ದಾಟಿದ್ದು ಅದಾಗಲೇ 39, 800 ಮಂದಿ ಬಲಿಯಾಗಿದ್ದಾರೆ.
ಲಾಕ್ ಡೌನ್ ಮಾಡಿ ಮೋದಿ ಏನು ಸಾಧಿಸಲ್ಲ, ನಾನು ಲಾಕ್ ಡೌನ್ ಮಾಡೋದಿಲ್ಲ: ಇಮ್ರಾನ್ ಖಾನ್ ಉದ್ಧಟತನ!ಭಾರತದಲ್ಲಿ ಸೋಂಕಿತರ ಸಂಖ್ಯೆ 100 ದಾಟುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ನಿರ್ಧಾರವನ್ನು ಕೈಗೊಂಡಿದ್ದರು. ಆದರೆ ಪಾಕ್ ಪ್ರಧಾನಿ ಮಾತ್ರ ಸೋಂಕಿತರ ಸಂಖ್ಯೆ 1700 ದಾಟಿದರೂ ಲಾಕ್ ಡೌನ್ ತೀರ್ಮಾನಕೈಗೊಳ್ಳದೆ ಮೋದಿ ಅವರನ್ನು ದೂಷಿಸುತ್ತಾ ಮೊಂಡಾಟ ಪ್ರದರ್ಶಿಸುತ್ತಿದ್ದಾರೆ.
ಕೊರೋನಾ ವೈರಸ್ ವಿಶ್ವದಲ್ಲಿ 11 ದಶಲಕ್ಷ ಜನರು ಬಡತನಕ್ಕೆ ತಳ್ಳಬಹುದು:ವಿಶ್ವಬ್ಯಾಂಕ್ ವರದಿಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೋನಾ ವೈರಸ್ ಸೋಂಕು ವಿಶ್ವದ ಬಹುತೇಕ ರಾಷ್ಟ್ರಗಳಿಗೆ ವ್ಯಾಪಿಸಿ ಪೂರ್ವ ಏಷ್ಯಾದಲ್ಲಿ 11 ದಶಲಕ್ಷಕ್ಕೂ ಅಧಿಕ ಜನರನ್ನು ಬಡತನಕ್ಕೆ ನೂಕಲಿದೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಕೆ ನೀಡಿದೆ.
ಇಸ್ರೇಲ್ ಪ್ರಧಾನಿಗೂ ಕೊರೋನಾ ವೈರಸ್ ಭೀತಿ, ಸ್ವಯಂ ದಿಗ್ಭಂಧನ ಹೇರಿಕೊಂಡ ನೆತಾನ್ಯಹುಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ಅವರಿಗೂ ಕೊರೋನಾ ವೈರಸ್ ಭೀತಿ ಅವರಿಸಿದ್ದು, ಅವರ ಅಧಿಕಾರಿಯೊಬ್ಬರಿಗೆ ಸೋಂಕು ಕಾಣಿಸಿಕೊಂಡ ಪರಿಣಾಮ ನೆತಾನ್ಯಹು ಅವರು ಸ್ವಯಂ ದಿಗ್ಭಂಧನದ ಮೊರೆ ಹೋಗಿದ್ದಾರೆ.
ಕೊರೋನಾವೈರಸ್ ನಿಂದ ಆರ್ಥಿಕತೆಗೆ ಹೊಡೆತ, ಜರ್ಮನ್ ರಾಜ್ಯ ಹಣಕಾಸು ಸಚಿವ ಆತ್ಮಹತ್ಯೆಕೊರೋನಾವೈರಸ್ ನಿಂದ ಆರ್ಥಿಕತೆ ಮೇಲೆ ತೀವ್ರ ಹೊಡೆತ ಬಿದ್ದ ಹಿನ್ನೆಲೆಯಲ್ಲಿ ತೀವ್ರ ಆತಂಕ್ಕೊಳಗಾದ ಜರ್ಮನಿಯ ರಾಜ್ಯ ಹಣಕಾಸು ಸಚಿವ ಥಾಮಸ್ ಸ್ಕೇಫರ್ ಹೆಸ್ಸೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊರೋನಾದಿಂದ ಅಮೆರಿಕಾದಲ್ಲಿ ಇನ್ನೆರಡು ವಾರ ಸಾವಿನ ಹೂಡೆತ ಸಾಧ್ಯತೆ: ಡೊನಾಲ್ಡ್ ಟ್ರಂಪ್ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಅಮೆರಿಕಾದಲ್ಲಿ ಇನ್ನೆರಡು ವಾರಗಳ ಕಾಲ ಸಾವಿನ ಪ್ರಕರಣಗಳು ಮುಂದುವರೆಯುವ ಸಾಧ್ಯತೆಯಿದೆ ಎಂದು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೋವಿಡ್-19: ನೇಪಾಳದಲ್ಲಿ ಹೆಚ್ಚಾದ ಕೊರೋನಾ ಪಾಸಿಟಿವ್, ಏ. 7ರವರೆಗೂ ಲಾಕ್ ಡೌನ್ ವಿಸ್ತರಣೆಕೊರೋನಾವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ನೇಪಾಳ ಸರ್ಕಾರ ಈಗಾಗಲೇ ಜಾರಿಗೊಳಿಸಿರುವ ಲಾಕ್ ಡೌನ್ ನ್ನು ಒಂದು ವಾರಗಳ ಕಾಲ ವಿಸ್ತರಿಸಿದೆ. ಕಳೆದ ವಾರದಿಂದ ಜಾರಿಗೊಳಿಸಿರುವ ಲಾಕ್ ಡೌನ್ ಏಪ್ರಿಲ್ 7ರವರೆಗೂ ಮುಂದುವರೆಯಲಿದೆ ಎಂದು ನೇಪಾಳ ಸರ್ಕಾರ ತಿಳಿಸಿದೆ.
ಕೋವಿಡ್ -19: ನ್ಯೂಯಾರ್ಕ್ ನಲ್ಲಿ 1 ಸಾವಿರ ಗಡಿ ಮೀರಿದ ಸಾವಿನ ಪ್ರಕರಣಗಳುಜಗತ್ತಿನಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ ಸಾವಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ನ್ಯೂಯಾರ್ಕ್ ರಾಜ್ಯದಲ್ಲಿ ಈ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1 ಸಾವಿರ ಗಡಿಯನ್ನು ದಾಟಿದೆ.
ಜಗತ್ತಿನಲ್ಲಿ ಕೊರೋನಾ ಪೀಡಿತರು 7 ಲಕ್ಷಕ್ಕೂ ಅಧಿಕ, ಇಟಲಿ, ಸ್ಪೈನ್ ನಲ್ಲಿ ಅತಿ ಹೆಚ್ಚು ಸಾವುಜಾಗತಿಕ ಮಟ್ಟದಲ್ಲಿ ಕೊರೋನಾ ಪೀಡಿತರ ಸಂಖ್ಯೆ 7 ಲಕ್ಷದ ಗಡಿ ದಾಟಿದೆ. ಇದುವರೆಗೆ 33 ಸಾವಿರದ 500 ಮಂದಿ ಮೃತಪಟ್ಟಿದ್ದು 1 ಲಕ್ಷದ 48 ಸಾವಿರ ಮಂದಿ ಗುಣಮುಖವಾಗಿದ್ದಾರೆ ಎಂದು ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯ ತಿಳಿಸಿದೆ.
ಜಾಗತಿಕ ಔಷಧ ಸರಬರಾಜಿಗೆ ಚೀನಾದಿಂದ ಹೆಚ್ಚುವರಿ ವಿಮಾನ ಸೇವೆಮಹಾಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ಜಾಗತಿಕವಾಗಿ ಔಷಧ ಸೇರಿದಂತೆ ವೈದ್ಯಕೀಯ ಸಾಧನ, ಸಲಕರಣೆಗಳು ಲಭ್ಯವಾಗುವಂತಾಗಲು ಚೀನಾ ತನ್ನ ಅಂತಾರಾಷ್ಟ್ರೀಯ ವೈಮಾನಿಕ ಸೇವೆಯನ್ನು ಹೆಚ್ಚಿಸಿದೆ.
ಕೊರೋನಾ ಕೊಟ್ಟ ಚೀನಾದಿಂದ ಸ್ಪೇನ್, ಇಟಲಿಗೆ ಕಳಪೆ ಟೆಸ್ಟ್ ಕಿಟ್, ಮಾಸ್ಕ್ ವಿತರಣೆ!ಜಗತ್ತಿಗೆ ಮಹಾಮಾರಿ ಕೊರೋನಾ ವೈರಸ್ ಕೊಟ್ಟ ಚೀನಾದಿಂದ ಇದೀಗ ಸೋಂಕಿನಿಂದ ತತ್ತರಿಸುತ್ತಿರುವ ದೇಶಗಳಾದ ಸ್ಪೇನ್ ಮತ್ತು ಇಟಲಿಗೆ ನಕಲಿ ಟೆಸ್ಟ್ ಕಿಟ್ ಮತ್ತು ಮಾಸ್ಕ್ ಕೊಟ್ಟಿದೆ ಎಂಬ ಆರೋಪ ಎದುರಾಗಿದೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?