ಅಮೇರಿಕಾದಲ್ಲಿ 13,000ಕ್ಕೂ ಮೀರಿದ ಸೋಂಕಿನ ಪ್ರಕರಣ: 200ಕ್ಕೇರಿದ ಸಾವಿನ ಸಂಖ್ಯೆಅಮೇರಿಕಾದಲ್ಲಿ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ 13,680ಕ್ಕೆ ತಲುಪಿದ್ದು, 200 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯವು ಶುಕ್ರವಾರ ಅಂಕಿಅಂಶಗಳನ್ನು ಪ್ರಕಟಿಸಿದೆ.
ಹುಟ್ಟೂರಲ್ಲೇ ಮಾಯವಾದ ಕೊರೋನಾ: ವುಹಾನ್ ನಲ್ಲಿ ಶೂನ್ಯಕ್ಕಿಳಿದ ಸೋಂಕಿತರ ಸಂಖ್ಯೆಚೀನಾದ ವುಹಾನ್ ನಲ್ಲಿ ಕಾಣಿಸಿಕೊಂಡು ಸುಮಾರು 3,000ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದುಕೊಂಡಿದ್ದ ಕೊರೋನಾ ವೈರಸ್, ಇದೀಗ ತನ್ನ ಹುಟ್ಟೂರಿನಿಂದಲೇ ಮಾಯವಾಗಿದೆ. ವುಹಾನ್ ನಲ್ಲಿ ಸೋಂಕಿತರ ಸಂಖ್ಯೆ ಇದೇ ಮೊದಲ ಬಾರಿಗೆ ಶೂನ್ಯಕ್ಕಿಳಿದಿದೆ.
ಕಿಲ್ಲರ್ ಕೊರೋನಾ ರುದ್ರ ನರ್ತನ; ಇಟಲಿಯಲ್ಲಿ 24 ಗಂಟೆಗಳಲ್ಲಿ 475 ಮಂದಿ ಸಾವುಮಾರಣಾಂತಿಕ ಕೊರೊನಾ ವೈರಸ್ (ಕೋವಿಡ್ -19) ದಾಳಿಗೆ ಐರೋಪ್ಯ ದೇಶಗಳು ತಲ್ಲಣಗೊಂಡಿದ್ದು, ಅದರಲ್ಲೂ ಇಟಲಿಯ ಪರಿಸ್ಥಿತಿ ತೀವ್ರ ಗಂಭೀರತೆಗೆ ತಿರುಗಿದೆ.
ದಾಂಪತ್ಯಕ್ಕೂ ಭಂಗ ತಂದ ಕೊರೋನಾ: ಮನೆಯಲ್ಲೇ ಇರುವ ದಂಪತಿಗಳ ನಡುವೆ ಕಿತ್ತಾಟ, ಚೀನಾದಲ್ಲಿ ಡಿವೋರ್ಸ್ ಸಂಖ್ಯೆ ಹೆಚ್ಚಳ!ಇಷ್ಟು ಕೇವಲ ಮನುಷ್ಯನ ಜೀವವನ್ನೂ ಮಾತ್ರ ತೆಗೆದುಕೊಳ್ಳುತ್ತಿದ್ದ ಕೊರೋನಾ ಇದೀಗ ದಂಪತಿಗಳ ದಾಂಪತ್ಯ ಜೀವನಕ್ಕೂ ಭಂಗ ತಂದಿದೆ. ವೈರಸ್ ಪರಿಣಾಮ ಮನೆಗಳಲ್ಲಿಯೇ ಇರುತ್ತಿರುವ ದಂಪತಿಗಳಲ್ಲಿ ಕಿತ್ತಾಟ ಹೆಚ್ಚಾಗುತ್ತಿದ್ದು, ಪರಿಣಾಮ ಚೀನಾದಲ್ಲಿ ವಿಚ್ಛೇದನಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನಲಾಗುತ್ತಿದೆ.
ಕೋವಿಡ್-19: ದೈನಂದಿನ ವೇತನ ಪಡೆಯುವವರಿಗಾದ ನಷ್ಟಕ್ಕೆ ಯೋಗಿ ಸರ್ಕಾರದಿಂದ ಪರಿಹಾರ!ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಭಾರತದ ಸರ್ಕಾರ ಲಾಕ್ ಡೌನ್ ಕ್ರಮ ಕೈಗೊಂಡಿದ್ದು, ಇದರ ನೇರ, ಪರೋಕ್ಷ ಪರಿಣಾಮ ದೈನಂದಿನ ವೇತನಕ್ಕಾಗಿ ದುಡಿಯುವ ವರ್ಗದವರ ಮೇಲೆ ಬೀರಿದೆ.
ಅಮೆರಿಕದಲ್ಲಿ ಎಲ್ಲ 50 ರಾಜ್ಯಗಳಿಗೆ ವ್ಯಾಪಿಸಿದ ಕೊವಿದ್-19: ಒಟ್ಟು ಸಾವಿನ ಸಂಖ್ಯೆ 112ಕ್ಕೆ ಏರಿಕೆಅಮೆರಿಕದಲ್ಲಿ ಕರೋನ ಸೋಂಕಿನಿಂದ ಮೃತಟ್ಟವರ ಸಂಖ್ಯೆ 105 ಕ್ಕೆ ತಲುಪುತ್ತಿದ್ದಂತೆ ಮಾರಣಾಂತಿಕ ಕರೋನವೈರಸ್ ಈಗ ದೇಶದ ಎಲ್ಲ 50 ರಾಜ್ಯಗಳನ್ನೂ ಬಿಡದೆ ಆಕ್ರಮಿಸಿಕೊಂಡಿದೆ.
ಜಗತ್ತನ್ನೇ ನಡುಗಿಸುತ್ತಿರುವ ಕೊರೋನಾ ವೈರಸ್ ಮಹಾಮಾರಿಗೆ 8 ಸಾವಿರ ಬಲಿ, ಭಾರತದಲ್ಲಿ 152 ಸೋಂಕು ಪತ್ತೆ!ಮಹಾಮಾರಿ ಕೊರೋನಾ ವೈರಸ್ ಭೀತಿಯಿಂದ ಚೀನಾ ಕೊಂಚ ಸುಧಾರಿಸಿಕೊಂಡಿದೆ. ಆದರೆ ಮಧ್ಯ ಪ್ರಾಚ್ಯ ದೇಶಗಳು ಮಾತ್ರ ತೀವ್ರ ಮಟ್ಟದಲ್ಲಿ ತತ್ತರಿಸಿದ್ದು ಜಗತ್ತಿನಾದ್ಯಂತ ಸಾವಿನ ಸಂಖ್ಯೆ 8 ಸಾವಿರ ಗಡಿದಾಟಿದೆ.
'ಚೈನೀಸ್ ವೈರಸ್' ಪದ ಸಮರ್ಥಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಇಡೀ ಪ್ರಪಂಚವನ್ನು ತಲ್ಲಣಗೊಳಿಸುತ್ತಿರುವ ಕೊರೋನಾ ವೈರಸ್ ಬಗ್ಗೆ ಅಮೆರಿಕ, ಚೀನಾ ನಡುವೆ ವಾಕ್ಸಮರ ಮುಂದುವರಿದೆ.
ಕೊರೋನಾವೈರಸ್: ಇಡೀ ವಿಶ್ವವೇ ಭೂಗತ ಶತ್ರುವಿನೊಂದಿಗೆ ಹೋರಾಡುತ್ತಿದೆ- ಟ್ರಂಪ್ಕೊರೋನಾ ವೈರಸ್ ಎಂಬ ಭೂಗತ ಶತ್ರುವಿನೊಂದಿಗೆ ಇಡೀ ವಿಶ್ವ ಹೋರಾಡುತ್ತಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿದ್ದಾರೆ.
ಕೊರೋನಾ ಬಗ್ಗುಬಡಿಯಲು ಔಷಧಿ ಸಿದ್ಧಪಡಿಸಿದ ಚೀನಾ: ರೋಗಿಗಳಿಗೆ ಫವಿಪಿರಾವಿರ್ ಲಸಿಕೆ, ಬಹುಬೇಗ ಜ್ವರ ಇಳಿಕೆವಿಶ್ವದಾದ್ಯಂತ ಮರಣಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್'ನ್ನು ಬಗ್ಗುಬಡಿಯಲು ಚೀನಾ ಔಷಧಿಯನ್ನು ಕಂಡು ಹಿಡಿದಿದ್ದು, ಫವಿಪಿರಾವಿರ್ ಎಂಬ ಲಸಿಕೆಯನ್ನು ಚೀನಾ ವಿಜ್ಞಾನಿಗಳು ಯಶಸ್ವಿಯಾಗಿ ರೋಗಿಗಳ ಮೇಲೆ ಪ್ರಯೋಗಿಸಿದ್ದಾರೆ.
ವೈರಸ್ ಪೀಡಿತ ವುಹಾನ್'ನಲ್ಲಿ ಕೊರೋನಾಗೆ ಭಾರೀ ಕಡಿವಾಣ: ಹೊಸದಾಗಿ ಒಬ್ಬ ವ್ಯಕ್ತಿಯಲ್ಲಿ ಮಾತ್ರ ಸೋಂಕು ಪತ್ತೆಕೊರೋನಾ ವೈರಸ್'ನ ಕೇಂದ್ರ ಸ್ಥಾನ ಎನಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಈಗ ಕೊರೋನಾ ವೈರಸ್ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದೆ.
ಕ್ಸಿ ಜಿನ್ಪಿಂಗ್, ಆರಿಫ್ ಅಲ್ವಿ ನಡುವಿನ ಮಾತುಕತೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಮತ್ತು ಪಾಕಿಸ್ತಾನ ಅಧ್ಯಕ್ಷ ಆರಿಫ್ ಅಲ್ವಿ ನಡುವೆ ಮಂಗಳವಾರ ನಡೆದ ಮಾತುಕತೆ ವೇಳೆಯಲ್ಲಿ ಕಾಶ್ಮೀರ ವಿಷಯ ಪ್ರಸ್ತಾಪವಾಗಿದೆ.
ಕೊರೋನಾವೈರಸ್ ನಿಂದ ಅಮೆರಿಕಾದಲ್ಲಿ 85 ಸಾವು: ದೇಶವಾಸಿಗಳು ಮನೆಯಲ್ಲಿಯೇ ಇರಿ- ಮೆಲಾನಿಯಾ ಟ್ರಂಪ್ಜಗತ್ತಿನಾದ್ಯಂತ ಹರಡಿರುವ ಮಾರಕ ಸಾಂಕ್ರಾಮಿಕ ರೋಗ ಕೊರೋನಾವೈರಸ್ ನಿಂದಾಗಿ ಅಮೆರಿಕಾದಲ್ಲಿ 85 ಜನರು ಸಾವನ್ನಪ್ಪಿದ್ದು, ಈ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ದೇಶವಾಸಿಗಳು ಮನೆಯಲ್ಲಿಯೇ ಇರುವಂತೆ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಕರೆ ನೀಡಿದ್ದಾರೆ.
ಟಿಕ್ ಟಾಕ್ ವಿಡಿಯೋ ‘ಕೊರೋನಾ ವೈರಸ್ ಚಾಲೆಂಜ್’ ವಿಮಾನದ ಶೌಚಾಲಯವನ್ನು ನೆಕ್ಕಿದ ಮಾಡೆಲ್, ನೆಟಿಗರು ಗರಂ!ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಮಾಡೆಲ್ ಒಬ್ಬಳು ಟಿಕ್ ಟಾಕ್ ನಲ್ಲಿ ಕೊರೋನಾ ವೈರಸ್ ಚಾಲೆಂಜ್ ಹೆಸರಿನಲ್ಲಿ ವಿಮಾನದ ಶೌಚಾಲಯವನ್ನು ನೆಕ್ಕಿದ್ದ ವಿಡಿಯೋವನ್ನು ಹರಿಬಿಟ್ಟಿದ್ದು ಇದಕ್ಕೆ ನೆಟಿಗರು ಗರಂ ಆಗಿದ್ದಾರೆ.
ಪ್ಯಾರಾಸೆಟಮೊಲ್, ಚಿಕನ್ ಸೂಪ್, ನಿಂಬೆ ಪಾನಕದಿಂದ 'ಕೊರೋನಾ' ಗೆದ್ದುಬಂದ ಬ್ರಿಟಿಷ್ ವೈದ್ಯೆ!ಪ್ಯಾರಾಸೆಟಮೊಲ್, ಚಿಕನ್ ಸೂಪ್ ಹಾಗೂ ನಿಂಬೆ ಪಾನಕ ಸೇವಿಸುವ ಮೂಲಕ ನಾನು ಮರಣಾಂತಿಕ ಕೊರೋನಾ ವೈರಸ್ ಸೋಂಕಿನಿಂದ ಸಂಪೂರ್ಣ ಗುಣಮುಖಳಾದೆ ಎಂದು ಬ್ರಿಟನ್ ನ ಹಿರಿಯ ವೈದ್ಯೆಯೊಬ್ಬರು ಹೇಳಿಕೊಂಡಿದ್ದಾರೆ.
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?