

ಸಾಕಷ್ಟು ವಿಳಂಬದ ನಂತರ, ಹಲವು ಬಾರಿ ಚಿತ್ರ ಬಿಡುಗಡೆ ದಿನಾಂಕ ಬದಲಾವಣೆಯ ನಂತರ, ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರ ಇದೀಗ ಆಗಸ್ಟ್ 26 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ತಂಡವು ಯಶ್ ಅವರ ಪಾತ್ರಕ್ಕಷ್ಟೇ ಅಲ್ಲದೆ ಚಿತ್ರದ ಮಹಿಳಾ ಪಾತ್ರವರ್ಗದ ಮೇಲೆಯೂ ಸಾಕಷ್ಟು ಗಮನ ಸೆಳೆದಿದೆ.
ಮಂಗಳವಾರ, ಚಿತ್ರದ ಅಧಿಕೃತ X ಖಾತೆಯಲ್ಲಿ, 'Where are the ladies? ಯಶ್ ಅವರೇ ಎಂದು ಕೇಳಿರುವ ನಿಗೂಢ ಪೋಸ್ಟ್ ಹಂಚಿಕೊಂಡಿದೆ.
ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಯಶ್, 'ಶಾಂತವಾಗಿರಿ! ಮಹಿಳೆಯರು ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ!' ಎಂದು ಉತ್ತರಿಸಿದ್ದಾರೆ. ಜುಲೈ 1 ರಂದು ಬೆಳಿಗ್ಗೆ 11.33ಕ್ಕೆ ಇದಕ್ಕೆಲ್ಲ ಉತ್ತರ ಸಿಗಲಿದೆ ಎಂದು ಅವರು ದೃಢಪಡಿಸಿದ್ದಾರೆ.
ಟಾಕ್ಸಿಕ್ ಚಿತ್ರ ಘೋಷಣೆಯಾದಾಗಿನಿಂದ, ಪ್ರೇಕ್ಷಕರು ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಅದರ ಮಹಿಳಾ ತಾರಾಗಣದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಉತ್ಸುಕರಾಗಿದ್ದಾರೆ. ಪ್ರತಿಯೊಬ್ಬ ನಾಯಕಿಯರಿಗೂ ಪ್ರತ್ಯೇಕ ಪಾತ್ರ ಪೋಸ್ಟರ್‌ಗಳು ಬಂದಿದ್ದರೂ, ಚಿತ್ರದ ಪ್ರಚಾರ ಸಾಮಗ್ರಿಗಳು ಇಲ್ಲಿಯವರೆಗಿನ ಯಶ್ ಪಾತ್ರಗಳಾದ ರಾಯ ಮತ್ತು ಟಿಕೆಟ್‌ನ ಸುತ್ತ ಸುತ್ತುತ್ತಿದ್ದು, ನಾಯಕರಿಯರ ಬಗ್ಗೆ ಅಥವಾ ಕಥೆಗೆ ಅವರ ಮಹತ್ವದ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ.
ಈ ಹಿಂದೆ ಚಿತ್ರದ ಬಗ್ಗೆ ಮಾತನಾಡಿದ ಯಶ್, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ 'ಸ್ತ್ರೀ ನೋಟ' ಈ ಯೋಜನೆಯ ದೊಡ್ಡ ಸಾಮರ್ಥ್ಯಗಳಲ್ಲಿ ಒಂದು. ದೊಡ್ಡ ಪ್ರಮಾಣದ ಆ್ಯಕ್ಷನ್ ಮತ್ತು ಗ್ಯಾಂಗ್‌ಸ್ಟರ್ ಚಿತ್ರಗಳು ಸಾಂಪ್ರದಾಯಿಕವಾಗಿ ಪುರುಷ ಪ್ರಧಾನವಾಗಿರುತ್ತವೆ. ಆದರೆ, ಟಾಕ್ಸಿಕ್ ಅದನ್ನು ಮೀರಿದ್ದಾಗಿದೆ ಎಂದು ಅವರು ವಿವರಿಸಿದರು.
ಗೀತು ಮೋಹನ್‌ದಾಸ್ ನಿರ್ದೇಶನದ ಮತ್ತು ಕೆವಿಎನ್ ಪ್ರೊಡಕ್ಷನ್ಸ್ ಬೆಂಬಲದೊಂದಿಗೆ, ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವು ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಲಾದ ಆವೃತ್ತಿಗಳ ಬಿಡುಗಡೆಗೆ ಯೋಜಿಸಲಾಗಿದೆ.