ಒಂದೇ ಪಂದ್ಯದಲ್ಲಿ ಎರಡೆರಡು ಜೀವದಾನ; ಆಸಿಸ್ ಬೌಲರ್ ಗಳ ಬೆಂಡೆತ್ತಿದ ಧೋನಿ

ಸಾಮಾನ್ಯವಾಗಿ ಕ್ರಿಕೆಟ್ ಒಂದೇ ಒಂದು ಜೀವದಾನವೇ ಇಡೀ ಪಂದ್ಯಕ್ಕೆ ತಿರುವು ನೀಡುಬಿಡಬಲ್ಲದು. ಆದರೆ ಒಂದೇ ಪಂದ್ಯದಲ್ಲಿ ಎರಡೆರಡು ಬಾರಿ ಜೀವದಾನ ನೀಡಿದರೆ..
ಎಂಎಸ್ ಧೋನಿ
ಎಂಎಸ್ ಧೋನಿ
Updated on: 
ಮೆಲ್ಬೋರ್ನ್: ಸಾಮಾನ್ಯವಾಗಿ ಕ್ರಿಕೆಟ್ ಒಂದೇ ಒಂದು ಜೀವದಾನವೇ ಇಡೀ ಪಂದ್ಯಕ್ಕೆ ತಿರುವು ನೀಡುಬಿಡಬಲ್ಲದು. ಆದರೆ ಒಂದೇ ಪಂದ್ಯದಲ್ಲಿ ಎರಡೆರಡು ಬಾರಿ ಜೀವದಾನ ನೀಡಿದರೆ..
ಹೌದು.. ಇಂದು ಮೆಲ್ಬೋರ್ನ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಕಾಂಗರೂಗಳ ಮಾಡಿದ ಎರಡು ಎಡವಟ್ಟುಗಳನ್ನು ಸದುಪಯೋಗ ಪಡಿಸಿಕೊಂಡ ಧೋನಿ ಅಕ್ಷರಶಃ ಆಸಿಸ್ ಬೌಲರ್ ಗಳ ಬೆಂಡೆತ್ತಿದರು. ಒಟ್ಟು 114 ಎಸೆತಗಳನ್ನು ಎದುರಿಸಿದ ಧೋನಿ 6 ಬೌಂಡರಿಗಳ ಸಮೇತ ಅಜೇಯ 87 ರನ್ ಸಿಡಿಸಿದರು.
ಆದರೆ ಧೋನಿ ಅವರ ಈ ಮ್ಯಾರಥಾನ್ ಇನ್ನಿಂಗ್ಸ್ ನಲ್ಲಿ ಆಸಿಸ್ ಆಟಗಾರರ ಎಡವಟ್ಟಿನ  ಸರಮಾಲೆ ಕೂಡ ಇದೆ. ಹೇಳಿ ಕೇಳಿ ಧೋನಿ ಅಪಾಯಕಾರಿ ಬ್ಯಾಟ್ಸಮನ್.. ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿದರೂ, ಡೆತ್ ಓವರ್ ಗಳಲ್ಲಿ ಧೋನಿ ಅಪಾಯಕಾರಿ ಆಟಗಾರ.. ಪರಿಸ್ಥಿತಿ ಹೇಗೇ ಇದ್ದರೂ ಅದನ್ನು ಅನುಕೂಲಕ್ಕೆ ತಕ್ಕಂತೆ ತಿರುಗಿಸಬಲ್ಲ ಚಾಣಾಕ್ಷ ಆಟಗಾರ. ಇಂತಹ ಧೋನಿಗೆ ಒಂದಲ್ಲ ಎರಡೆರಡು ಬಾರಿ ಆಸಿಸ್ ಆಟಗಾರರು ಜೀವದಾನ ನೀಡಿದ್ದಾರೆ.
ಕ್ರೀಸ್ ಗೆ ಕಾಲಿಟ್ಟ ಆರಂಭದಲ್ಲೇ ಧೋನಿ ಶೂನ್ಯಕ್ಕೆ ನಿರ್ಗಮಿಸಬೇಕಿತ್ತು. 17ನೇ ಓವರ್ ನ 2ನೇ ಎಸೆತದಲ್ಲಿ ಧವನ್ ಔಟಾದಾಗ ಕ್ರೀಸ್ ಗೆ ಆಗಮಿಸಿದ ಧೋನಿ ತಾವು ಎದುರಿಸಿದ ಮೊದಲ ಎಸೆತದಲ್ಲೇ ಔಟಾಗಬೇಕಿತ್ತು. ಸ್ಟಾಯಿನಿಸ್ ಎಸೆದ ಎಸೆತವನ್ನು ಧೋನಿ ಶಾರ್ಟ್ ಲೆಂತ್ ನತ್ತ ಭಾರಿಸಿದರು. ಆದರೆ ಇದನ್ನು ಕ್ಯಾಚ್ ಆಗಿ ಪಡೆಯುವಲ್ಲಿ ಮ್ಯಾಕ್ಸ್ ವೆಲ್ ವಿಫಲರಾದರು. ಇದು ಆಸಿಸ್ ತಂಡಕ್ಕೆ ಸಿಕ್ಕ ಚಿನ್ನದ ಅವಕಾಶವಾಗಿತ್ತು. ಬಳಿಕ ಧೋನಿ ನಿಧಾನಗತಿಯಲ್ಲೇ ಇನ್ನಿಂಗ್ಸ್ ಕಟ್ಟಲಾರಂಭಿಸಿದರು. 
ಬಳಿಕ 29ನೇ ಓವರ್ ನಲ್ಲಿ ಮತ್ತೆ ಧೋನಿ ವಿಕೆಟ್ ಪಡೆಯುವ ಅವಕಾಶ ಆಸಿಸ್ ಗೆ ಸಿಕ್ಕಿತ್ತು. ನಿಜ ಹೇಳ ಬೇಕು ಎಂದರೆ ಈ ಬಾರಿ ನಿಜಕ್ಕೂ ಧೋನಿ ಔಟ್ ಆಗಿದ್ದರೂ, ಆಸಿಸ್ ಆಟಗಾರರ ಅನುಮಾನದಿಂದಾಗಿ ಅವರು ಜೀವದಾನ ಪಡೆದರು. 29ನೇ ಓವರ್ ನ ಐದನೇ ಎಸೆತದಲ್ಲಿ ಧೋನಿ ಬೌಂಡರಿಯತ್ತ ಚೆಂಡನ್ನು ಭಾರಿಸಲು ಮುಂದಾದರು. ಈ ವೇಳೆ ಚೆಂಡು ಧೋನಿ ಬ್ಯಾಟ್ ನ ಅಂಚನ್ನು ಸವರಿಕೊಂಡು ವಿಕೆಟ್ ಕೀಪರ್ ಕೈ ಸೇರಿತ್ತು. ಆದರೆ ಚೆಂಡು ಬ್ಯಾಟ್ ತೀರ ಸಮೀಪಕ್ಕೆ ಹೋಗಿ ಮಿಸ್ ಆಗಿದೆ ಎಂದು ಭಾವಿಸಿದ ಆಸಿಸ್ ಆಟಗಾರರು ಪ್ರಬಲವಾಗಿ ಅಪೀಲ್ ಮಾಡಲಿಲ್ಲ. ಬಳಿಕ ಹಾಟ್ ಸ್ಪಾಟ್ ವ್ಯವಸ್ಥೆಯನ್ನು ಇದನ್ನು ವೀಕ್ಷಿಸಿದಾಗ ಧೋನಿ ಔಟ್ ಆಗಿರುವುದು ಕಂಡುಬಂತು. ಆದರೆ ಅಷ್ಟು ಹೊತ್ತಿಗಾಗಲೇ ಕಾಲ ಮಿಂಚಿತ್ತು, ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಸಿಡಿಸಿದ ಧೋನಿ ತಂಡವನ್ನು ಯಶಸ್ವಿಯಾಗಿ ಗೆಲುವಿನ ದಡ ಸೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com