ಜಿಲ್ಲಾ ಸುದ್ದಿ

ದರೋಡೆಗೆ ಹೊಂಚು ಹಾಕಿದ್ದವರ ಸಂಚು ವಿಫಲ

ದರೋಡೆಗೆ ಹೊಂಚು ಹಾಕಿದ್ದವರ ಸಂಚು ವಿಫಲ
(ಸಂಗ್ರಹ ಚಿತ್ರ)
Published On :

ಬೆಂಗಳೂರು: ನಗರದಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿಸಿದ್ದ ಕುಖ್ಯಾತಿ ರೌಡಿ ಭರತ್ ಕುಮಾರ್ ಅಲಿಯಾಸ್ ಸ್ಲಂ ಭರತ ಮತ್ತು ಆತನ ಐವರು ಸಹಚರರನ್ನು ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಪೊಲೀಸರು ಬಂಧಿಸಿ, ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಗೋಪಾಲನಗರ ಬಸಪ್ಪನ ಕಟ್ಟೆ ನಿವಾಸಿ ಭರತ್ ಕುಮಾರ್(27) ಈಶ್ವರ ಅಲಿಯಾಸ್ ಜುಟ್ಟು (29), ಗೋಪಿ (24), ಚಂದ್ರಶೇಖರ್ (21), ರಮೇಶ್ ಅಲಿಯಾಸ್ ಕುರ್‍ಕುರೆ(22) ಹಾಗೂ ಲವಕುಶನಗರದ ಮಧು(23) ಬಂಧಿತರು. ಆರೋಪಿಗಳು ಡಿ.17ರಂದು ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀನಿವಾಸಪುರ ಮುಖ್ಯರಸ್ತೆ ಬಳಿ ಮಾರಕಾಸuಉ ಹಿಡಿದು ಹಣವಂತರು, ಉದ್ಯಮಿಗಳ ಮೇಲೆ ದಾಳಿ ನಡೆಸಿ ಹಣ, ಚಿನ್ನಾಭರಣ ದರೋಡೆ ನಡೆಸಲು ಸಂಚು ಹಾಕಿ ಕುಳಿತಿದ್ದರು.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು  ಬಂಧಿಸಿದ್ದಾರೆ. ಕಾರದ ಪುಡಿ ಎರಚಿ ದಾಳಿ ನಡೆಸುವುದು ದುಷ್ಕರ್ಮಿಗಳ ಯೋಜನೆಯಾಗಿತ್ತು.
ಇದಕ್ಕೆ ಪೂರಕವಾಗಿ ಬಂಧಿತರ ಬಳಿ ಖಾರದ ಪುಡಿ ಪೊಟ್ಟಣಗಳು ಸಿಕ್ಕಿವೆ. ರಾಜರಾಜೇಶ್ವರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಲಂ ಭರತನ ಮೇಲೆ ಗೂಂಡಾ ಕಾಯ್ದೆ ಅಡಿ ಪ್ರಕರಣ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಕರಣಗಳಿವೆ. ಇದಲ್ಲದೆ, ಅಮೃತಹಳ್ಳಿ, ಶೇಷಾದ್ರಿಪುರಂ, ಜಯನಗರ, ಆರ್‍ಎಂಸಿ ಯಾರ್ಡ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ. 2015ರಲ್ಲಿ ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಮಧು ಕೂಡ ರಾಜಗೋಪಾಲನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಆಗಿದ್ದಾನೆ. ಇನ್ನು ಈಶ್ವರ ಅಲಿಯಾಸ್ ಜುಟ್ಟು , ಗೋಪಿ, ಚಂದ್ರಶೇಖರ್ ಹಾಗೂ ರಮೇಶನ ವಿರುದ್ಧ
ರಾಜಗೋಪಾಲನಗರ ಸೇರಿದಂತೆ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಜೈಲಿ ಸೇರಿದ್ದ ಆರೋಪಿಗಳು,
ಜಾಮೀನಿನ ಮೇಲೆ ಹೊರ ಬಂದಿದ್ದರು. ಆದರೂ ದರೋಡೆಗೆ ಸಂಚು ರೂಪಿಸುತ್ತಲೇ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.