

ಬೆಂಗಳೂರು: ಬಿಎಂಟಿಸಿ ಬಸ್‍ಗಳಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದ್ದ ಪ್ರಯಾಣಿಕರಿಗೆ ದಂಡ ವಿಧಿಸಿದ್ದ ತನಿಖಾ ತಂಡ ಸಂಸ್ಥೆಗೆ ರು. 13.99 ಲಕ್ಷ ಆದಾಯ ತಂದುಕೊಟ್ಟಿದೆ. ಟಿಕೆಟ್ ನೀಡಿಕೆಯಲ್ಲಿ ನಿರ್ಲಕ್ಷ್ಯ ತೋರಿದ್ದ ನಿರ್ವಾಹಕರ ಮೇಲೆ 3852 ಪ್ರಕರಣಗಳು ದಾಖಲಾಗಿವೆ.
ಕಳೆದ ನವೆಂಬರ್‍ನಲ್ಲಿ ಬಿಎಂಟಿಸಿ ತನಿಖಾ ತಂಡ ನಗರಾದ್ಯಂತ ಸಂಚರಿಸುವ ಬಸ್‍ಗಳ 26,378 ಟ್ರಿಪ್‍ಗಳನ್ನು ತಪಾಸಣೆ ಮಾಡಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದ 7,619 ಪ್ರಯಾಣಿಕರನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿದೆ. ಅಲ್ಲದೇ ಮಹಿಳಾ ಸೀಟ್ ಗಳಲ್ಲಿ ಕುಳಿತ್ತಿದ್ದ 1,182 ಪುರುಷ ಪ್ರಯಾಣಿ ಕರಿಂದ ರು. 1.18 ಲಕ್ಷ ದಂಡ ಸಂಗ್ರಹಿಸಿದೆ ಎಂದು ಬಿಎಂಟಿಸಿ ತಿಳಿಸಿದೆ.