ಕರ್ನಾಟಕದ ಹೆಮ್ಮೆಗೆ ಮತ್ತೊಂದು ಗರಿ: ಮೊದಲ ಬಾರಿಗೆ ಕಾಮನ್‌ವೆಲ್ತ್ ಮಹಿಳಾ ಜನಪ್ರತಿನಿಧಿಗಳ ಸಮ್ಮೇಳನಕ್ಕೆ ಬೆಂಗಳೂರು ಆತಿಥ್ಯ..!
ಎರಡು ದಿನಗಳ ಸಮ್ಮೇಳನವು ಮಹಿಳಾ ಸಂಸದರು ಹಾಗೂ ಶಾಸಕರು ಸಾರ್ವಜನಿಕ ಜೀವನದಲ್ಲಿ ಎದುರಿಸುತ್ತಿರುವ ಸವಾಲುಗಳ ಕುರಿತು ಚರ್ಚಿಸಲು ಮತ್ತು ಶಾಸಕಾಂಗ ಹಾಗೂ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸಲು ವೇದಿಕೆಯಾಗಲಿದೆ.


