ಅಮೆರಿಕ ಪ್ಯಾಲೆಸ್ತೀನಿಯನ್ನರ ಹಿತಾಸಕ್ತಿ ಕಡೆಗಣಿಸುತ್ತಿದೆ: ರಷ್ಯಾ ಅಧ್ಯಕ್ಷ ಪುಟಿನ್ ಕಿಡಿಇಸ್ರೇಲ್ ಗೆ ಸೇನಾ ನೆರವು ನೀಡುವ ಮೂಲಕ ಅಮೆರಿಕ ಪ್ಯಾಲೆಸ್ತೀನಿಯನ್ನರ ಹಿತಾಸಕ್ತಿಗಳನ್ನು ಕಡೆಗಣಿಸುತ್ತಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕಿಡಿಕಾರಿದ್ದಾರೆ.
ಆಘಾತಕಾರಿ ದಾಳಿಗಳ ಮೂಲಕ ಇಸ್ರೇಲ್ ಅನ್ನೇ ಕಂಗೆಡಿಸಿದ 'ಹಮಾಸ್' ಹಿನ್ನೆಲೆ ಏನು?ಅಕ್ಟೋಬರ್ 7ರಂದು ಬೆಳಗ್ಗೆ ಸರಿಸುಮಾರು 4000ಕ್ಕೂ ಹೆಚ್ಚು ರಾಕೆಟ್ ಗಳನ್ನು ಇಸ್ರೇಲ್ ಮೇಲೆ ಸುರಿಸಲಾಯಿತು. ಇದು ಬಲಿಷ್ಠ ಐರನ್ ಡೋಮ್ ವಾಯು ರಕ್ಷಣಾ ವ್ಯವಸ್ಥೆಯನ್ನೇ ಮೀರಿಸಿತ್ತು.
ಜೋಹಾನ್ಸ್ಬರ್ಗ್ನ ಟಾಲ್ಸ್ಟಾಯ್ ಫಾರ್ಮ್ನಲ್ಲಿ ಮಹಾತ್ಮ ಗಾಂಧಿಯವರ ಎಂಟು ಅಡಿ ಎತ್ತರ ಪ್ರತಿಮೆ ಅನಾವರಣ!ಮಹಾತ್ಮಾ ಗಾಂಧಿಯವರು 20 ನೇ ಶತಮಾನದ ಆರಂಭದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ವಕೀಲರಾಗಿದ್ದ ಸಮಯದಲ್ಲಿ ಅವರು ಪ್ರಾರಂಭಿಸಿದ ಟಾಲ್ಸ್ಟಾಯ್ ಫಾರ್ಮ್ನಲ್ಲಿ ಎಂಟು ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ.
ಗಾಜಾ ಪಟ್ಟಿಯ ಸುತ್ತ 1,500 ಹಮಾಸ್ ಭಯೋತ್ಪಾದಕರ ಶವ ಪತ್ತೆ: ಇಸ್ರೇಲ್ ಸೇನೆಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಸಮಯದಲ್ಲಿ ಸಾವಿನ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದೆ. ಇಲ್ಲಿಯವರೆಗೆ, ಎರಡೂ ಕಡೆಗಳಲ್ಲಿ ಜೀವ ಮತ್ತು ಆಸ್ತಿ ನಷ್ಟದ ಬಗ್ಗೆ ಯಾವುದೇ ಅಧಿಕೃತ ಅಂಕಿಅಂಶಗಳು ಬಹಿರಂಗವಾಗಿಲ್ಲ.
'ನಾವು ಈ ಯುದ್ಧ ಆರಂಭಿಸಲಿಲ್ಲ, ಆದರೆ ಮುಗಿಸುತ್ತೇವೆ; ಹಮಾಸ್ ತಕ್ಕ ಶಿಕ್ಷೆ ಅನುಭವಿಸುವುದು ಖಂಡಿತ': ಇಸ್ರೇಲ್ ಪ್ರಧಾನಿ ನೆತನ್ಯಾಹುಹಮಾಸ್ ಉಗ್ರರ ಭೀಕರ ದಾಳಿಗೆ ಕಠಿಣ ಎಚ್ಚರಿಕೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಲಿಲ್ಲ, ಆದರೆ ಮುಗಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಮಾಸ್ ವಿರುದ್ಧ ಹೋರಾಡಲು ಇಸ್ರೇಲ್ 48 ಗಂಟೆಗಳಲ್ಲಿ 3 ಲಕ್ಷ ಸೈನಿಕರ ಸಜ್ಜು: ಹಮಾಸ್ ಗೆ ಎಫ್ ಬಿಐ ಎಚ್ಚರಿಕೆಗಾಜಾದಿಂದ ಹಮಾಸ್ ಉಗ್ರರ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲ್ ದಾಖಲೆಯ 3 ಲಕ್ಷ ಪಡೆಯನ್ನು ಒಗ್ಗೂಡಿಸಿ ಆಕ್ರಮಣ ನಡೆಸಲು ಮುಂದಾಗಿದೆ ಎಂದು ಮುಖ್ಯ ಮಿಲಿಟರಿ ವಕ್ತಾರರು ಹೇಳಿದ್ದಾರೆ.
ಗಾಜಾ ಮುತ್ತಿಗೆಗೆ ಇಸ್ರೇಲ್ ಆದೇಶ: 2.3 ಮಿಲಿಯನ್ ಜನರಿಗೆ ವಿದ್ಯುತ್, ಆಹಾರ, ನೀರು ಪೂರೈಕೆ ಸ್ಥಗಿತಗಾಜಾ ಪಟ್ಟಿಯ ಮೇಲೆ ಸಂಪೂರ್ಣ ಮುತ್ತಿಗೆ ಹಾಕುವಂತೆ ಸೋಮವಾರ ಸೇನೆಗೆ ಆದೇಶಿಸಿದ ಇಸ್ರೇಲ್, ಗಾಜಾದ 2.3 ಮಿಲಿಯನ್ ಜನರಿಗೆ ವಿದ್ಯುತ್, ನೀರು, ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದೆ.
ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ನಡೆಸಿದರೆ ಇಸ್ರೇಲ್ ಒತ್ತೆಯಾಳುಗಳ ಹತ್ಯೆ: ಹಮಾಸ್ ಬೆದರಿಕೆಇಸ್ರೇಲ್ ಸೇನೆ ಪೂರ್ವ ಎಚ್ಚರಿಕೆ ನೀಡದೆ ಗಾಜಾ ಪಟ್ಟಿಯ ನಿವಾಸಿಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆ ಹಮಾಸ್ ಸೋಮವಾರ ಬೆದರಿಕೆ ಹಾಕಿದೆ.
ಹಮಾಸ್ ಹಿಮ್ಮೆಟ್ಟಿಸಲು ಇಸ್ರೇಲ್ ನಿಂದ ಗಾಜಾ ಮೇಲೆ ಯುದ್ಧ ತೀವ್ರ: 1,100 ಕ್ಕೂ ಅಧಿಕ ಮಂದಿ ಬಲಿಇಸ್ರೇಲ್ ಸೈನಿಕರು ಎನ್ಕ್ಲೇವ್ನ ಹಮಾಸ್ ಆಡಳಿತಗಾರರ "ಮಿಲಿಟರಿ ಮತ್ತು ಆಡಳಿತ ಸಾಮರ್ಥ್ಯಗಳನ್ನು" ನಾಶಮಾಡುವುದಾಗಿ ಯುದ್ಧ ಘೋಷಿಸಿದ ನಂತರ ಇಂದು ಸೋಮವಾರ ಗಾಜಾ ಪಟ್ಟಿಯ ಮೇಲೆ ತನ್ನ ಬಾಂಬ್ ದಾಳಿಯನ್ನು ತೀವ್ರಗೊಳಿಸಿದೆ.ದಕ್ಷಿಣ ಇಸ್ರೇಲ್ನ ಪ್ರದೇಶಗಳಿಂದ ಗಾಜಾ ಬಂದೂಕುಧಾರಿಗಳನ್ನು ಹೊರಹಾಕಲು ಇಸ್ರೇಲಿ ಸೈನಿಕರು ಯುದ್ಧ ತೀವ್ರಗೊಳಿಸಿದ್ದಾರೆ.
ಯುದ್ಧಪೀಡಿತ ಇಸ್ರೇಲ್ ಗೆ ಅಮೆರಿಕ ಮಿಲಿಟರಿ ನೆರವು: ಹಡಗು ಮತ್ತು ವಿಮಾನಗಳ ರವಾನೆಉಗ್ರಗಾಮಿ ಸಂಘಟನೆ ಹಮಾಸ್ ನಿಂದ ಭೀಕರ ರಾಕೆಟ್ ದಾಳಿಗೆ ತುತ್ತಾಗಿ ಅಪಾರ ಸಂಖ್ಯೆಯಲ್ಲಿ ನಾಗರಿಕರನ್ನು ಕಳೆದುಕೊಂಡಿರುವ ಇಸ್ರೇಲ್ ಮೇಲೆ 5 ಸಾವಿರಕ್ಕೂ ಅಧಿಕ ರಾಕೆಟ್ ದಾಳಿ ನಡೆಸಿದ್ದು, ಸಾವಿರಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಈ ಕೃತ್ಯವನ್ನು ಅಮೆರಿಕ ಹಾಗೂ ಭಾರತ ಖಂಡಿಸಿದೆ.
ಇಸ್ರೇಲ್-ಹಮಾಸ್ ಯುದ್ಧ: ಇಸ್ರೇಲ್ನಲ್ಲಿ 600 ದಾಟಿದ ನಾಗರಿಕರ ಸಾವಿನ ಸಂಖ್ಯೆ, ಗಾಜಾದಲ್ಲಿ 300 ಕ್ಕೂ ಹೆಚ್ಚು ಸಾವುಇಸ್ರೇಲಿ ಸೈನಿಕರು ನಿನ್ನೆ ಭಾನುವಾರ ದಕ್ಷಿಣ ಇಸ್ರೇಲ್ನ ಬೀದಿಗಳಲ್ಲಿ ಹಮಾಸ್ ಉಗ್ರರ ವಿರುದ್ಧ ಅಕ್ಷಶಃ ಯುದ್ಧಕ್ಕಿಳಿದಿದ್ದರು. ಗಾಜಾದಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಿದ ಪ್ರತೀಕಾರದ ದಾಳಿಯನ್ನು ಪ್ರಾರಂಭಿಸಿದರು, ಆದರೆ ಉತ್ತರ ಇಸ್ರೇಲ್ನಲ್ಲಿ ಲೆಬನಾನ್ನ ಹಿಜ್ಬುಲ್ಲಾ ಉಗ್ರಗಾಮಿ ಗುಂಪಿನೊಂದಿಗೆ ನಡೆದ ದಾಳಿ ದೊಡ್ಡ ಯುದ್ಧಕ್ಕೆ ದಾರಿಮಾಡಿಕೊಟ್ಟಿತು.
ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿ: ಸಾವಿನ ಸಂಖ್ಯೆ 400ಕ್ಕೆ ಏರಿಕೆಗಾಜಾ ಪಟ್ಟಿಯ ಬಳಿ ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 400ಕ್ಕೆ ಏರಿಕೆಯಾಗಿದೆ ಮತ್ತು ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಎಂದು ಟೈಮ್ಸ್ ಆಫ್ ಇಸ್ರೇಲ್ ಭಾನುವಾರ ವರದಿ ಮಾಡಿದೆ.
ಇಸ್ರೇಲ್ ನಲ್ಲಿ ಹಮಾಸ್ ಉಗ್ರರು ಪರೇಡ್ ನಡೆಸಿದ್ದ ಯುವತಿ ಜರ್ಮನ್ ಸಿಟಿಜನ್?; 'ಮಗಳ ಮೃತದೇಹವನ್ನಾದರೂ ನೀಡಿ': ತಾಯಿ ಆಕ್ರಂದನಇಸ್ರೇಲ್ ಮೇಲಿನ ದಾಳಿ ವೇಳೆ ಹಮಾಸ್ ಉಗ್ರರು ಪರೇಡ್ ನಡೆಸಿದ್ದ ಯುವತಿ ಇಸ್ರೇಲಿಗಳಲ್ಲ... ಬದಲಿಗೆ ಆಕೆ ಜರ್ಮನ್ ಸಿಟಿಜನ್.. ಕನಿಷ್ಠ ಆಕೆಯ ಮೃತದೇಹವನ್ನಾದರೂ ನೀಡಿ ಎಂದು ಹಮಾಸ್ ಉಗ್ರರಿಗೆ ಮಹಿಳೆಯೊಬ್ಬರು ಮನವಿ ಮಾಡಿದ್ದಾರೆ.
ಹಮಾಸ್ ರಾಕೆಟ್ ದಾಳಿ: 22 ಮಂದಿ ಇಸ್ರೇಲಿಯನ್ನರ ಸಾವು, 200ಕ್ಕೂ ಹೆಚ್ಚು ಮಂದಿ ಗಾಯಇಂದು ಶನಿವಾರ ಹಮಾಸ್ ಉಗ್ರಗಾಮಿಗಳೊಂದಿಗೆ ನಡೆದ ರಾಕೆಟ್ ಯುದ್ಧದಲ್ಲಿ ಇಸ್ರೇಲ್ ನಲ್ಲಿ 22 ಮಂದಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಮೆಗೆನ್ ಡೇವಿಡ್ ಅಡೋಮ್ ತುರ್ತು ವೈದ್ಯಕೀಯ ಸೇವೆಗಳಿಂದ ತಿಳಿದುಬಂದಿದೆ.
ಇಸ್ರೇಲ್ ಮೇಲಿನ ರಾಕೆಟ್ ದಾಳಿಯಲ್ಲಿ ಕೇರಳ ಮೂಲದ ಮಹಿಳೆಗೆ ಗಾಯ, ಆರೋಗ್ಯ ಸ್ಥಿರ!ಪ್ಯಾಲೇಸ್ಟಿನ್ ಉಗ್ರಗಾಮಿ ಗುಂಪು ಹಮಾಸ್ ಉತ್ತರ ಇಸ್ರೇಲ್ ನ ಅಶ್ಕೆಲೋನ್ ಮೇಲೆ ರಾಕೆಟ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video