ಹಾಸ್ಯ ಚಕ್ರವರ್ತಿ ಚಾರ್ಲಿ ಚಾಪ್ಲಿನ್ ಪುತ್ರಿ ಜೋಸೆಫೀನ್ ಚಾಪ್ಲಿನ್ ವಿಧಿವಶಅಮೆರಿಕ ಮೂಲದ ಮೀಡಿಯಾ ಔಟ್ ಲೆಟ್ ವರೈಟಿ ಪ್ರಕಾರ, ಚಾಪ್ಲಿನ್ ಜುಲೈ 13 ರಂದು ಪ್ಯಾರಿಸ್ನಲ್ಲಿ ನಿಧನರಾದರು ಎಂದು ಅವರ ಕುಟುಂಬ ತಿಳಿಸಿದೆ. ಜೋಸೆಫೀನ್ ಅವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಅಮೆರಿಕ: ಸಿಡಿಲು ಬಡಿದು ಭಾರತೀಯ ವಿದ್ಯಾರ್ಥಿನಿ ಮೆದುಳಿಗೆ ಹಾನಿ; ಸಾವು ಬದುಕಿನ ನಡುವೆ ಹೋರಾಟ!ಅಮೆರಿಕದ ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಗೆ ಸಿಡಿಲು ಬಡಿದು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.
ವಿವಾಹೇತರ ಸಂಬಂಧ: ಭಾರತೀಯ ಮೂಲದ ಸಿಂಗಾಪುರದ ವಿರೋಧ ಪಕ್ಷದ ಸಂಸದ ರಾಜಿನಾಮೆ!ಸಹ ಸಂಸದೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಸಿಂಗಾಪುರದ ಅತಿದೊಡ್ಡ ವಿರೋಧ ಪಕ್ಷದ ಭಾರತೀಯ ಮೂಲದ ಸಂಸದ ಲಿಯಾನ್ ಪೆರೆರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಾಕಿಸ್ತಾನ: ನಿರ್ಮಾಣ ಹಂತದ ಸೇತುವೆ ಬಳಿ ಗೋಡೆ ಕುಸಿದು 11 ಮಂದಿ ಕಾರ್ಮಿಕರು ಸಾವುಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಹೊರವಲಯದಲ್ಲಿ ನಿರ್ಮಾಣ ಹಂತದ ಸೇತುವೆ ಬಳಿಯ ಗೋಡೆ ಕುಸಿದು 11 ಕಾರ್ಮಿಕರು ಬುಧವಾರ ಮುಂಜಾನೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಮತ್ತು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಂಕ್ ಮಾಡಿದ್ದಕ್ಕೆ 3 ಯುವಕರ ಹತ್ಯೆ: ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಯ ಬಂಧನತಮಗೆ ಪ್ರಾಂಕ್ ಮಾಡಿದ 3 ಯುವಕರ ಹತ್ಯೆ ಮಾಡಿದ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಮೇರಿಕಾದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಪೆರೋಲ್ ರಹಿತ ಜೈಲು ರಹಿತ ಶಿಕ್ಷೆ ವಿಧಿಸಲಾಗಿದೆ
ವಿದೇಶಿ ವಿನಿಮಯ ಬಿಕ್ಕಟ್ಟು, ಇಸ್ಲಾಮಾಬಾದ್ ವಿಮಾನ ನಿಲ್ದಾಣವನ್ನು ಹೊರಗುತ್ತಿಗೆ ನೀಡಲು ಪಾಕ್ ಮುಂದುಪಾಕಿಸ್ತಾನದ ವಿದೇಶಾಂಗ ವಿನಿಮಯ ನಿರಂತರವಾಗಿ ಕುಸಿಯುತ್ತಿದ್ದು, ಪ್ರಮುಖ ವಿಮಾನ ನಿಲ್ದಾಣಗಳನ್ನು ಹೊರಗುತ್ತಿಗೆಗೆ ನೀಡುವ ಅನಿವಾರ್ಯತೆ ಎದುರಾಗಿದೆ.
ಅಲಸ್ಕಾದಲ್ಲಿ 7.4 ತೀವ್ರತೆಯ ಭಾರಿ ಭೂಕಂಪನ; ಸುನಾಮಿ ಎಚ್ಚರಿಕೆಅಮೆರಿಕದ ಅಲಾಸ್ಕ ಬಳಿ ಭೀಕರ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆ ದಾಖಲಾಗಿದೆ.
ಪ್ರಧಾನಿ ಮೋದಿ ಭೇಟಿ: ದುಬೈನ ಬುರ್ಜ್ ಖಲೀಫಾ ಕಟ್ಟಡಕ್ಕೆ ಭಾರತದ ತ್ರಿವರ್ಣ ಧ್ವಜ ಬಣ್ಣಗಳಿಂದ ಅಲಂಕಾರಫ್ರಾನ್ಸ್ ಪ್ರವಾಸ ಮುಗಿಸಿಕೊಂಡು ಗಲ್ಫ್ ರಾಷ್ಟ್ರ ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಬಂದಿಳಿದ ಪ್ರಧಾನಿ ಮೋದಿಯವರಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಅಬು ಧಾಬಿಯ ಖ್ಯಾತ ಬುರ್ಜ್ ಖಲೀಫಾವನ್ನು ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಭಾರತದ ತ್ರಿವರ್ಣ ಧ್ವಜಗಳ ಬಣ್ಣದ ದೀಪಗಳಿಂದ ಅಲಂಕರಿಸಲಾಗಿತ್ತು.
ಫ್ರಾನ್ಸ್ ಪ್ರವಾಸ ಮುಗಿಸಿ ಅಬು ಧಾಬಿಗೆ ಆಗಮಿಸಿದ ಪ್ರಧಾನಿ ಮೋದಿ: ಅಧ್ಯಕ್ಷ ಶೇಖ್ ಮೊಹಮ್ಮದ್ ಭೇಟಿಪ್ರಧಾನಿ ನರೇಂದ್ರ ಮೋದಿ ಅವರು ಯುನೈಟೆಡ್ ಅರಬ್ ಎಮಿರೇಟ್ಸ್(UAE)ಗೆ ಒಂದು ದಿನದ ಭೇಟಿಗಾಗಿ ಇಂದು ಶನಿವಾರ ಆಗಮಿಸಿದರು.
ಭಾರತ-ಫ್ರಾನ್ಸ್ ದ್ವಿಪಕ್ಷೀಯ ಮಾತುಕತೆ: ಪರಮಾಣು ಶಕ್ತಿ, ರಕ್ಷಣಾ ಕ್ಷೇತ್ರದಲ್ಲಿ ಕಾರ್ಯತಂತ್ರ ಪಾಲುದಾರಿಕೆ ಕುರಿತು ಚರ್ಚೆಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಶುಕ್ರವಾರ ಪ್ಯಾರಿಸ್ನ ಎಲಿಸೀ ಪ್ಯಾಲೇಸ್ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು, ಪರಮಾಣು ಶಕ್ತಿ, ರಕ್ಷಣೆ ಮತ್ತು ಮುಂದಿನ 25 ವರ್ಷಗಳಲ್ಲಿ ಭಾರತ-ಫ್ರಾನ್ಸ್ ಕಾರ್ಯತಂತ್ರಪಾಲುದಾರಿಕೆಯ ಮಾರ್ಗಸೂಚಿ ಕುರಿತು ಚರ್ಚೆ ನಡೆಸಿದರು.
ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರ ಗೂಂಡಾಗಿರಿ: ಭಾರತೀಯ ವಿದ್ಯಾರ್ಥಿ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ!ಆಸ್ಟ್ರೇಲಿಯಾದಲ್ಲಿ ಖಲಿಸ್ತಾನ್ ಬೆಂಬಲಿಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಮೇಲೆ ಕಬ್ಬಿಣದ ರಾಡ್ ಗಳಿಂದ ಥಳಿಸಿದ್ದಾರೆ.
ಭಾರತ-ಫ್ರಾನ್ಸ್ 25 ವರ್ಷಗಳ ಬಂಧವನ್ನು ಆಚರಿಸುತ್ತಿವೆ, ಪ್ರೀತಿಯ ಮೋದಿಯವರಿಗೆ...: ಹಿಂದಿಯಲ್ಲಿ ಸ್ವಾಗತ ಕೋರಿದ ಫ್ರಾನ್ಸ್ ಅಧ್ಯಕ್ಷ!ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಶುಕ್ರವಾರ ಹಿಂದಿಯಲ್ಲಿ ಬರೆದ ವಿಶೇಷ ಟ್ವೀಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡಿರುವ ಹೃದಯಸ್ಪರ್ಶಿ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಭಾರತೀಯ ಪ್ರವಾಸಿಗರು ಇನ್ನು ಮುಂದೆ ಫ್ರಾನ್ಸ್ನಲ್ಲಿ ಯುಪಿಐ ಬಳಸಿ ಪಾವತಿಸಲು ಅವಕಾಶ: ಪ್ರಧಾನಿ ಮೋದಿ ಘೋಷಣೆಫ್ರಾನ್ಸ್ ಗೆ ಪ್ರಯಾಣ ಬೆಳೆಸುವ ಭಾರತೀಯರಿಗೆ ಇಲ್ಲಿದೆ ಶುಭಸುದ್ದಿ. ಶೀಘ್ರದಲ್ಲೇ ಫ್ರಾನ್ಸ್ನಲ್ಲಿ ಯುಪಿಐ ಬಳಸಿ ಪಾವತಿಸಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡುವ ವೇಳೆ ಘೋಷಿಸಿದ್ದಾರೆ.
ಬದಲಾಗುತ್ತಿರುವ ಜಗತ್ತಿನಲ್ಲಿ ಭಾರತದ ಶಕ್ತಿ, ಪಾತ್ರ ಬಹುಬೇಗ ಬದಲಾಗುತ್ತಿದೆ: ಪ್ಯಾರಿಸ್ನಲ್ಲಿ ಪ್ರಧಾನಿ ಮೋದಿ ಮಾತುಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಗುರುವಾರ ಫ್ರಾನ್ಸ್ನ ಪ್ಯಾರಿಸ್ನಲ್ಲಿ ಭಾರತೀಯ ವಲಸಿಗರನ್ನುದ್ದೇಶಿಸಿ ಮಾತನಾಡಿದರು. ಭಾರತವು ಪ್ರಜಾಪ್ರಭುತ್ವಕ್ಕೆ ತಾಯಿಯಾಗಿದ್ದು, ವೈವಿಧ್ಯತೆಗೆ ಮಾದರಿಯಾಗಿದೆ ಎಂದು ಹೇಳಿದರು ಮತ್ತು ಅದು ಅದರ ಪ್ರಜಾಪ್ರಭುತ್ವದ ಅತ್ಯಂತ ಶಕ್ತಿಶಾಲಿ ಅಂಶವಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿಗೆ ಫ್ರಾನ್ಸ್ ನ ಅತ್ಯುನ್ನತ ನಾಗರಿಕ ಗೌರವ: ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ರಿಂದ ಆತಿಥ್ಯಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಫ್ರಾನ್ಸ್ನ ಅತ್ಯುನ್ನತ ಗೌರವವಾದ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ನೀಡಿ ಗೌರವಿಸಿದ್ದಾರೆ.
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!