ವಾಷಿಂಗ್ ಟನ್ ತಲುಪಿದ ಪ್ರಧಾನಿ: ಬೈಡನ್ ಜೊತೆ ಔತಣಕೂಟ, ಅಮೆರಿಕಾ ಕಾಂಗ್ರೆಸ್ ಉದ್ದೇಶಿಸಿ ಮೋದಿ ಭಾಷಣಅಮೇರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ ಟನ್ ತಲುಪಿದ್ದು, ಅಲ್ಲಿರುವ ಅನಿವಾಸಿ ಭಾರತೀಯ ಸಮೂಹ ಅದ್ಧೂರಿಯಿಂದ ಸ್ವಾಗತಿಸಿದ್ದಾರೆ.
'ದಶ ದಾನ'ದ ಪೆಟ್ಟಿಗೆಯನ್ನು ಜೋ ಬೈಡನ್ ಗೆ ಗಿಫ್ಟ್ ಆಗಿ ಕೊಟ್ಟ ಪ್ರಧಾನಿ ಮೋದಿ: ಉಡುಗೊರೆಯ ಸಂದೇಶವೇನು?ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ಗೆ 'ದಸ್ ದಾನಮ್' 10 ವಸ್ತುಗಳನ್ನು ದಾನಗಳನ್ನು ಹೊಂದಿರುವ ಕರಕುಶಲ ವಸ್ತುಗಳನ್ನಿಟ್ಟು ಶ್ರೀಗಂಧದ ಪೆಟ್ಟಿಗೆಯನ್ನು ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ಹಸಿರು ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಚೀನಾ: ರೆಸ್ಟೋರೆಂಟ್ನಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ, 31 ಮಂದಿ ಸಾವುವಾಯುವ್ಯ ಚೀನಾದ ಬಾರ್ಬೆಕ್ಯೂ ರೆಸ್ಟೋರೆಂಟ್ನಲ್ಲಿ ಭಾರಿ ಅಡುಗೆ ಅನಿಲ ಸ್ಫೋಟ ಸಂಭವಿಸಿದ್ದು, ಕನಿಷ್ಠ 31 ಜನರು ಸಾವನ್ನಪ್ಪಿದ್ದಾರೆ ಮತ್ತು ಏಳು ಮಂದಿ ಗಾಯಗೊಂಡಿದ್ದಾರೆ.
ಆತಂಕಕಾರಿ ಅಂಶಗಳ ಬಗ್ಗೆ ಮೋದಿ ಬಳಿ ನೇರವಾಗಿ ವಿಷಯ ಪ್ರಸ್ತಾಪಿಸಿ: ಬೈಡನ್ ಗೆ ಅಮೇರಿಕಾ ಶಾಸಕರುಅಮೇರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಅವರ ಬಳಿ ದ್ವಿಪಕ್ಷೀಯ ಮಾತುಕತೆ ವೇಳೆ, ಆತಂಕಕ್ಕೆ ಕಾರಣವಾಗಿರುವ ವಿಷಯಗಳನ್ನು ನೇರವಾಗಿ ಪ್ರಸ್ತಾಪಿಸಲು ಮನವಿ ಮಾಡಿ ಅಧ್ಯಕ್ಷ ಜೋ ಬೈಡನ್ ಗೆ ಅಮೇರಿಕಾ ಶಾಸಕರು ಪತ್ರ ಬರೆದಿದ್ದಾರೆ.
ಅಮೇರಿಕಾದಲ್ಲಿನ ದ್ವೇಷ ಅಪರಾಧಗಳು, ಮಾನವ ಹಕ್ಕುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಭಾರತ!ಅಮೇರಿಕಾದಲ್ಲಿ ನಡೆಯುತ್ತಿರುವ ದ್ವೇಷ ಪೂರಿತ ಅಪರಾಧಗಳು, ಮಾನವ ಹಕ್ಕುಗಳ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ ಎಂದು ಬೈಡನ್ ಆಡಳಿತದ ಪ್ರಮುಖ ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ಪ್ರವಾಸದಲ್ಲಿ ಪ್ರಧಾನಿ ಮೋದಿ: ಹೆಚ್-1ಬಿ ವೀಸಾ ನಿಯಮ ಸಡಿಲಗೊಳಿಸಲು ಅಮೆರಿಕ ಚಿಂತನೆಕುಶಲ, ನುರಿತ ಉದ್ಯೋಗಿಗಳು ಕೆಲಸಕ್ಕೆಂದು ಅಮೆರಿಕಕ್ಕೆ ಹೋಗಲು ಅಥವಾ ಅಲ್ಲಿಯೇ ಉಳಿದುಕೊಳ್ಳಲು ಸಹಾಯವಾಗಲು ಜೊ ಬೈಡನ್ ಸರ್ಕಾರವು ಹೆಚ್-1ಬಿ ವೀಸಾ(H-1B visa) ನಿಯಮವನ್ನು ಸಡಿಲಗೊಳಿಸುತ್ತದೆ ಎಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಮೋದಿ ನೇತೃತ್ವದಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಸೇರ್ಪಡೆಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ಬುಧವಾರ ನಡೆದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಗಿನ್ನಿಸ್ ದಾಖಲೆ ಸೃಷ್ಟಿಸಿದೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆ: ಪ್ರಧಾನಿ ಮೋದಿ ನೇತೃತ್ವದಲ್ಲಿ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗಾಭ್ಯಾಸನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು.
ಪ್ರಧಾನಿ ಮೋದಿ ಅಮೇರಿಕಾ ಭೇಟಿ ಸಮಯದಲ್ಲೇ ಜಿನ್ಪಿಂಗ್ ರನ್ನು ಸರ್ವಾಧಿಕಾರಿ ಎಂದ ಜೋ ಬೈಡನ್ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಭೇಟಿ ಸಮಯದಲ್ಲೇ ಅಮೆರಿಕಾ ಅಧ್ಯಕ್ಷ ಜೋ ಬೈಡನ್, ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರನ್ನು ಸರ್ವಾಧಿಕಾರಿ ಎಂದು ಕರೆದಿದ್ದಾರೆ.
ಭಾರತದ ಮೇಲೆ ಭರವಸೆ ಹೆಚ್ಚು, ಟೆಸ್ಲಾ ಕಂಪೆನಿ ಭಾರತದಲ್ಲಿ ಹೂಡಿಕೆ ಮಾಡುವುದು ಖಂಡಿತ: ಎಲೋನ್ ಮಸ್ಕ್ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಐತಿಹಾಸಿಕ ಅಮೆರಿಕ ಭೇಟಿಯ ಮೊದಲ ಭಾಗವಾಗಿ ನಿನ್ನೆ ಮಂಗಳವಾರ ನ್ಯೂಯಾರ್ಕ್ ಸಿಟಿಯಲ್ಲಿ ಜಗತ್ತಿನ ಖ್ಯಾತ ಬಿಲಿಯನೇರ್ ಉದ್ಯಮಿಗಳನ್ನು ಭೇಟಿ ಮಾಡಿದ್ದರು. ಅವರಲ್ಲಿ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಕೂಡ ಒಬ್ಬರು.
'ನಾನು ಮೋದಿಯವರ ಬಹಳ ದೊಡ್ಡ ಅಭಿಮಾನಿ, ಭಾರತದ ಭವಿಷ್ಯ ಉಜ್ವಲವಾಗಿದೆ': ಟೆಸ್ಲಾ ಸಿಇಒ ಎಲೋನ್ ಮಸ್ಕ್ಭಾರತವು ಇತರ ದೊಡ್ಡ ದೇಶಗಳಿಗಿಂತ ಭವಿಷ್ಯದ ಮಟ್ಟಿಗೆ ನೋಡಿದರೆ ಹೆಚ್ಚಿನ ಭರವಸೆಯನ್ನು ಹೊಂದಿದೆ. ಭಾರತದ ಭವಿಷ್ಯದ ಬಗ್ಗೆ ನೋಡಲು ಹಾಗೂ ತಿಳಿದುಕೊಳ್ಳಲು ತೀವ್ರ ಉತ್ಸುಕನಾಗಿದ್ದೇನೆ ಎಂದು ಟೆಸ್ಲಾ ಸಿಇಒ ಎಲೋನ್ ಮಸ್ಕ್ ಹೇಳಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನ ಮಂತ್ರಿ ನ್ಯೂಯಾರ್ಕ್ ನಲ್ಲಿ ಎಲೋನ್ ಮಸ್ಕ್ ಸೇರಿದಂತೆ
ಪಾಕ್ ಮೂಲದ ಎಲ್ಇಟಿ ಭಯೋತ್ಪಾದಕ, 26/11 ಆರೋಪಿ ಸಜಿದ್ ಮಿರ್ ಕಪ್ಪು ಪಟ್ಟಿಗೆ ಸೇರಿಸಲು ಚೀನಾ ಅಡ್ಡಗಾಲುಪಾಕ್ ಮೂಲದ ಭಯೋತ್ಪಾದಕ ಸಜಿದ್ ಮಿರ್ ನ್ನು ವಿಶ್ವಸಂಸ್ಥೆಯಲ್ಲಿ ಕಪ್ಪು ಪಟ್ಟಿಗೆ ಸೇರಿಸುವ ಭಾರತದ ಯತ್ನಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ.
ಅಮೆರಿಕಾ ಅಧ್ಯಕ್ಷ ಬೈಡನ್ ಪುತ್ರನ ವಿರುದ್ಧ ತೆರಿಗೆ, ಶಸ್ತ್ರಾಸ್ತ್ರ ಅಕ್ರಮ ಆರೋಪಅಮೆರಿಕಾ ಅಧ್ಯಕ್ಷ ಜೋ ಬೈಡನ್ ಪುತ್ರನ ವಿರುದ್ಧ ತೆರಿಗೆ ಶಸ್ತ್ರಾಸ್ತ್ರ ಅಕ್ರಮ ಆರೋಪ ಕೇಳಿಬಂದಿದೆ.
ನ್ಯೂಯಾರ್ಕ್ ತಲುಪಿದ ಪ್ರಧಾನಿ ಮೋದಿ: 3 ದಿನಗಳ ಅಮೇರಿಕಾ ಪ್ರವಾಸ ಆರಂಭ; ಯೋಗ ದಿನಾಚರಣೆಯಲ್ಲಿ ಭಾಗಿಪ್ರಧಾನಿ ನರೇಂದ್ರ ಮೋದಿ ನ್ಯೂಯಾರ್ಕ್ ತಲುಪಿದ್ದು, 3 ದಿನಗಳ ಅಮೇರಿಕಾ ಪ್ರವಾಸವನ್ನು ಆರಂಭಿಸಿದ್ದಾರೆ.
ಅಫ್ಘಾನ್ ಸ್ವಾಧೀನಪಡಿಸಿಕೊಂಡ ನಂತರ ಎರಡನೇ ಸಾರ್ವಜನಿಕ ಮರಣದಂಡನೆ ವಿಧಿಸಿದ ತಾಲಿಬಾನ್!ಅಫ್ಘಾನಿಸ್ತಾನದ ಮಸೀದಿಯೊಂದರ ಆವರಣದಲ್ಲಿ ಅಪರಾಧಿ ಕೊಲೆಗಾರನನ್ನು ಇಂದು ಸಾರ್ವಜನಿಕವಾಗಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2021ರ ಆಗಸ್ಟ್ ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಎರಡನೇ ಸಾರ್ವಜನಿಕ ಮರಣದಂಡನೆ ಇದಾಗಿದೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video