ಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ನೀಡಕೂಡದು: ವಿಶ್ವ ಆರೋಗ್ಯ ಸಂಸ್ಥೆಲಾಕ್ ಡೌನ್ ತೆರವುಗೊಳಿಸಿದ ಬಳಿಕ ವೈರಸ್ ಇಮ್ಯುನಿಟಿ ಪಾಸ್ ಅಥವಾ ರಿಸ್ಕ್ ಫ್ರೀ ಪ್ರಮಾಣಪತ್ರಗಳನ್ನು ಜನರಿಗೆ ನೀಡಬಾರದೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ತಿಳಿಸಿದೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯ ಸ್ಥಿತಿ ಗಂಭೀರ:ಜಪಾನ್ ಮಾಧ್ಯಮ ವರದಿಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ಜಪಾನ್ ಮಾಧ್ಯಮ ವರದಿ ಮಾಡಿದೆ.
ಕೊರೋನಾ ವಿರುದ್ಧ ಹೋರಾಟ; ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ ಅಮೆರಿಕನ್ನರಿಂದ 'ಡ್ರೈವ್ ಆಫ್ ಹಾನರ್' ಗೌರವಮಾರಕ ಕೊರೋನಾ ವಿರುದ್ಧ ಅಮೆರಿಕದಲ್ಲಿ ಹೋರಾಡುತ್ತಿರುವ ಕರ್ನಾಟಕ ಮೂಲದ ಮತ್ತೋರ್ವ ವೈದ್ಯೆಗೆ ಅಮೆರಿಕನ್ನರು 'ಡ್ರೈವ್ ಆಫ್ ಹಾನರ್' ಗೌರವ ಸಲ್ಲಿಕೆ ಮಾಡಿದ್ದಾರೆ.
ಕೊರೋನಾ ವೈರಸ್: ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯಿಂದ ಹೃದಯಕ್ಕೆ ಅಪಾಯ: ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ ಎಫ್ಡಿಎ ಎಚ್ಚರಿಕೆಮಾರಕ ಕೊರೋನಾ ವೈರಸ್ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧ ಬಳಕೆಯಿಂದ ಹೃದಯಕ್ಕೆ ಅಪಾಯವಿದೆ ಎಂದು ಅಮೆರಿಕದ ಆಹಾರ ಮತ್ತು ಔಷಧ ಆಡಳಿತ ಮಂಡಳಿ ಎಫ್ಡಿಎ ಎಚ್ಚರಿಕೆ ನೀಡಿದೆ.
ಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು: 4,000 ಸಿಬ್ಬಂದಿಗಳು ಕ್ವಾರಂಟೇನ್ ಗೆಲಂಕಾ ನೌಕಾಪಡೆಯ 60 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಅವರ ಸಂಪರ್ಕದಲ್ಲಿದ್ದ 4,000 ಸಿಬ್ಬಂದಿಗಳನ್ನು ಕ್ವಾರಂಟೇನ್ ಗೆ ಒಳಪಡಿಸಲಾಗಿದೆ.
ಅಮೆರಿಕಾದಲ್ಲಿ 24 ಗಂಟೆಗಳಲ್ಲಿ 1,258 ಮಂದಿ ಬಲಿ, ಸಾವಿನ ಸಂಖ್ಯೆ 51,017ಕ್ಕೆ ಏರಿಕೆವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾಗೆ ಒಟ್ಟು ಬಲಿಯಾದವರ ಸಂಖ್ಯೆ ಶುಕ್ರವಾರ 50 ಸಾವಿರ ಗಡಿ ದಾಟಿದೆ.
ರಾಜತಾಂತ್ರಿಕ ಸಂಬಂಧದ ಮೇಲೆ ನಕಲಿ ಟ್ವೀಟ್ ಗಳ ಕರಿ ನೆರಳು: ಗಲ್ಫ್ ನಾಯಕರಿಗೆ ಕರೆ ಮಾಡಿದ ಮೋದಿ, ಜೈಶಂಕರ್!ಇತ್ತೀಚಿನ ದಿನಗಳಲ್ಲಿ ಗಲ್ಫ್ ಅರಬ್ ರಾಷ್ಟ್ರಗಳಲ್ಲಿ ಕಂಡುಬರುತ್ತಿರುವ ಕೋಮು ಸಮಸ್ಯೆಯನ್ನು ಸೃಷ್ಟಿಸುವ ನಕಲಿ ಟ್ವೀಟ್ ಗಳು ಭಾರತ- ಅರಬ್ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧದ ಮೇಲೆ ಕರಿ ಛಾಯೆ ಆವರಿಸುವ ಆತಂಕ ಉಂಟುಮಾಡಿತ್ತು.
ಕೊರೋನಾ ವೈರಸ್ ಚಿಕಿತ್ಸೆಗೆ ಟ್ರಂಪ್ ಸಲಹೆ ಕೇಳಿ ದಂಗಾದ ವೈದ್ಯರು, ವಿಜ್ಞಾನಿಗಳು!ಕೊರೋನಾ ವೈರಸ್ ನಿಂದ ತತ್ತರಿಸಿರುವ ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸಲಹೆ ಕೇಳಿ ವೈದ್ಯರು, ವಿಜ್ಞಾನಿಗಳು ದಂಗಾಗಿದ್ದಾರೆ.
ಕೊರೋನಾಗೆ ಇಡೀ ವಿಶ್ವ ಕಂಗಾಲು: 1.95 ಲಕ್ಷಕ್ಕೇರಿದ ಸಾವಿನ ಸಂಖ್ಯೆ, 2.79 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಚೀನಾದಲ್ಲಿ ಹುಟ್ಟಿ ವಿವಿಧ ರಾಷ್ಟ್ರಗಳಿಗೆ ಹರಡಿರುವ ಕೊರೋನಾ ವೈರಸ್'ಗೆ ಇದೀಗ ಇಡೀ ವಿಶ್ವವೇ ಕಂಗಾಲಾಗಿದೆ. ಮಹಾಮಾರಿ ವೈರಸ್ ಈವರೆಗೂ ಪ್ರಪಂಚದಾದ್ಯಂತ 1.95 ಮಂದಿಯನ್ನು ಬಲಿಪಡೆದುಕೊಂಡಿದ್ದು, , ವೈರಸ್ ಮಟ್ಟಹಾಕಲು ಇಡೀ ವಿಶ್ವವೇ ಹರಸಾಹಸ ಪಡುತ್ತಿದೆ.
ವಿಶ್ವಾದ್ಯಂತ 1,90,000 ಮಂದಿ ಕೊರೋನಾಗೆ ಬಲಿ, 2.7 ಮಿಲಿಯನ್ ದಾಟಿದ ಸೋಂಕಿತರ ಸಂಖ್ಯೆಕೊರೋಣಾವೈರಸ್ ಸಾಂಕ್ರಾಮಿಕ ರೋಗದಿಂದ ಶುಕ್ರವಾರದವರೆಗೆ ವಿಶ್ವದಾದ್ಯಂತ ಮೃತಪಟ್ಟವರ ಸಂಖ್ಯೆ 190,000 ದಾಟಿದೆ,. ಇದರಲ್ಲಿ ಯುರೋಪ್ ಖಂಡವೊಂದರಲ್ಲೇ ಸುಮಾರು ಮೂರನೇ ಎರಡರಷ್ಟು ಸಾವುನೋವುಗಳು ಸಂಭವಿಸಿವೆ ಎಂದು ಎಎಫ್ಪಿ ನ್ಯೂಸ್ ಏಜನ್ಸಿ ಹೇಳಿದೆ.
ಕೋವಿಡ್-19 ಲಾಕ್ ಡೌನ್: ಅಮೆರಿಕಾದಲ್ಲಿ ವೃದ್ಧರು, ಮಕ್ಕಳ ಮುಖದಲ್ಲಿ ನಗೆ ತರುತ್ತಿರುವ ಭಾರತೀಯ ಮೂಲದ ಬಾಲಕಿ ಹಿತಾ ಗುಪ್ತಈಕೆಯ ವಯಸ್ಸಿನ ಬೇರೆ ಸಾಮಾನ್ಯ ಮಕ್ಕಳಾದರೆ ಕೊರೋನಾ ವೈರಸ್ ಲಾಕ್ ಡೌನ್ ಸಮಯದಲ್ಲಿ ಆಟವಾಡಿಕೊಂಡು, ವಿಡಿಯೊ ಗೇಮ್ ಆಡಿಕೊಂಡು, ಸಿನೆಮಾ ನೋಡಿಕೊಂಡು ಇರುತ್ತಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಕೊರೋನಾ ವೈರಸ್ ಔಷಧ ಮಾನವ ಪ್ರಯೋಗ ವಿಫಲವಿಶ್ವದ 130ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಲಸಿಕೆ ಕಂಡು ಹಿಡಿಯುವ ರೇಸ್ ನಲ್ಲಿದ್ದ ಅಮೆರಿಕ ಮೂಲದ ಔಷಧ ಕಂಪನಿಯ ಕೊರೋನಾ ವೈರಸ್ ಔಷಧದ ಮೊದಲ ಮಾನವ ಪ್ರಯೋಗ ವಿಫಲವಾಗಿದೆ ಎಂದು ತಿಳಿದುಬಂದಿದೆ.
ಅಂದು ಆರ್ಥಿಕ ಮಹಾಕುಸಿತ, ಇಂದು ಕೊರೋನಾ-ನಿರುದ್ಯೋಗ ಸಮಸ್ಯೆಯಿಂದ ತತ್ತರಿಸಿದ ದೊಡ್ಡಣ್ಣ ಅಮೆರಿಕಾ!ಅಮೆರಿಕಾದಲ್ಲಿ 1930 ರ ಮಹಾ ಆರ್ಥಿಕ ಕುಸಿತದ ನಂತರದಲ್ಲಿ ಇದೇ ಮೊದಲ ಬಾರಿಗೆ ನಿರುದ್ಯೋಗ ಸಮಸ್ಯೆ ಅತ್ಯಂತ ಹೆಚ್ಚಾಗಿ ಕಾಣಿಸಿದೆ. ಕೊರೋನಾವೈರಸ್ ಹಾವಳಿಯ ಕಾರಣ ಅಮೆರಿಕಾದಲ್ಲಿ 6 ಮಂದಿಯಲ್ಲಿ ಒಬ್ಬನನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಅಮೆರಿಕಾ ಸಂಸತ್ತು ಸುಮಾರು 500 ಶತಕೋಟಿ ಡಾಲರ್ ವೆಚ್ಚದ ಪ್ಯಾಕೇಜ್ ಅನ್ನು ಅಂಗೀಕರಿಸಿದೆ.
ಜಗತ್ತಿನಾದ್ಯಂತ ಕೊರೋನಾ ಆರ್ಭಟ: 24 ಗಂಟೆಯಲ್ಲಿ 5 ಸಾವಿರ ಬಲಿ; ಒಟ್ಟಾರೆ 1,89 ಲಕ್ಷ ಸಾವು, 27 ಲಕ್ಷ ಮಂದಿಗೆ ಸೋಂಕು!ಜಗತ್ತಿನಾದ್ಯಂತ ಕೊರೋನಾ ಆರ್ಭಟ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 5 ಸಾವಿರ ಮಂದಿ ಬಲಿಯಾಗಿದ್ದು ಸಾವಿನ ಸಂಖ್ಯೆ 1,89 ಲಕ್ಷಕ್ಕೇರಿದೆ. ಇನ್ನು 64 ಸಾವಿರ ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು ಒಟ್ಟಾರೆ ಸೋಂಕಿತರ ಸಂಖ್ಯೆ 27 ಲಕ್ಷಕ್ಕೇರಿದೆ.
ಅಮೆರಿಕಾದಲ್ಲಿ ಕೊರೋನಾ ರೌದ್ರನರ್ತನ: ಕೇವಲ 24 ಗಂಟೆಗಳಲ್ಲಿ 3,176 ಮಂದಿ ಬಲಿ, ಸಾವಿನ ಸಂಖ್ಯೆ 50 ಸಾವಿರಕ್ಕೆ ಏರಿಕೆವಿಶ್ವದ ದೊಡ್ಡಣ್ಣ ಅಮೆರಿಕಾದಲ್ಲಿ ಕೊರೋನಾ ವೈರಸ್ ತನ್ನ ರೌದ್ರ ನರ್ತನವನ್ನು ಮುಂದುವರೆಸಿದ್ದು, ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 3,176 ಮಂದಿ ಬಲಿಯಾಗಿದ್ದಾರೆ.
ದೇಶಪಂಜಾಬ್ ಚುನಾವಣೆ: ಬಿಜೆಪಿ-ಶಿರೋಮಣಿ ಅಕಾಲಿ ದಳ (SAD) ಮೈತ್ರಿ ಘೋಷಣೆ; 'ವಾಜಪೇಯಿ-ಅಡ್ವಾಣಿ' ಯುಗದಷ್ಟು ಹಳೆಯ ಬಾಂಧವ್ಯ- ಅಮಿತ್ ಶಾ
ರಾಜ್ಯ'ಇದು ಅವುಗಳ ಮನೆ ಕೂಡ, ದಾರಿ ನೆನಪಿರುತ್ತದೆ, ಆನೆಗಳ ಸ್ಥಳಾಂತರ ಪರಿಹಾರವಲ್ಲ': ಸರ್ಕಾರಕ್ಕೆ ನಟಿ ರಮ್ಯಾ ಹೇಳಿದ್ದೇನು?