ಬಿಹಾರ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಗೆ ಕನ್ಹಯ್ಯ ಕುಮಾರ್ ಗೈರು; ಪತ್ರಕರ್ತರ ಮೇಲೆ ಹಲ್ಲೆ
ಬಿಹಾರ ಪ್ರದೇಶ ಕಾಂಗ್ರೆಸ್ ಪ್ರಧಾನ ಕಚೇರಿಯಾದ ಸದಾಕತ್ ಆಶ್ರಮದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಆಸನ ವ್ಯವಸ್ಥೆ ಕುರಿತು ವಿವಾದ ಉಂಟಾಯಿತು. ಪರಿಸ್ಥಿತಿ ಉಲ್ಬಣಗೊಂಡು ಪತ್ರಕರ್ತರು ಮತ್ತು ಕೆಲವು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆಯಿತು.


