₹75 ಲಕ್ಷ ರೂಪಾಯಿಗಳ ವಂಚನೆ: ಉತ್ತರ ಪ್ರದೇಶ ಮಾಜಿ ಶಾಸಕ, ಪುತ್ರರ ವಿರುದ್ಧ ಕೇಸ್!ಸ್ಕ್ರ್ಯಾಪ್ ವ್ಯಾಪಾರಿ ಜಿತೇಂದ್ರ ಚೌಧರಿ ಈ ದೂರು ನೀಡಿದ್ದಾರೆ. ಶಾಸಕರ ಪುತ್ರರಾದ ಅಬ್ದುಲ್ ಅಹ್ಮದ್ ರಾಣಾ ಮತ್ತು ಅಜಮ್ ಶಾ ರಾಣಾ ಅವರ ವಿರುದ್ಧವೂ ತನಿಖೆ ನಡೆಯುತ್ತಿದೆ.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ ವೇಳೆ ತಮಿಳುನಾಡು ಸಚಿವ ₹45 ಲಕ್ಷ ರೂ ಮೌಲ್ಯದ 'ದುಬಾರಿ ವಾಚ್' ಧರಿಸಿದ್ರಾ? ನೆಟ್ಟಿಗರ ಕುತೂಹಲಈ ಭೇಟಿಯ ಚಿತ್ರಗಳು ವೈರಲ್ ಆಗುತ್ತಿದ್ದಂತೆಯೇ ಸಚಿವರು ಸುಮಾರು 45 ಲಕ್ಷ ರೂ. ಮೌಲ್ಯದ ಐಷಾರಾಮಿ 'ರೋಲೆಕ್ಸ್ ಡೇಟೋನಾ' (Rolex Daytona) ವಾಚ್ ಎಂದು ಕೆಲವು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳುತ್ತಿದ್ದರು.
ತೆರಿಗೆ ಕಡಿತ ಕೊಟ್ಟಿದ್ದೇವೆ, ಆದರೆ ಉದ್ಯೋಗ, ವೇತನ ಹೆಚ್ಚಳ ಯಾಕಾಗಿಲ್ಲ?: ಉದ್ಯಮ ವಲಯವನ್ನು ಪ್ರಶ್ನಿಸಿದ ಪ್ರಧಾನಿ ಮೋದಿ; Videoದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (ಫಿಕ್ಕಿ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಉದ್ಯೋಗ ಸೃಷ್ಟಿ, ಹೂಡಿಕೆ ಮತ್ತು ಭಾರತದ ದೀರ್ಘಕಾಲೀನ ಆರ್ಥಿಕ ಅಭಿವೃದ್ಧಿಗೆ ತಮ್ಮ ಕೊಡುಗೆಯನ್ನು ಪರಿಶೀಲಿಸುವಂತೆ ಕಂಪನಿಗಳಿಗೆ ಸೂಚಿಸಿದರು.
ತಮಿಳುನಾಡು: ಮಾಜಿ ಸಿಎಂ MK ಸ್ಟಾಲಿನ್ ಸೋಲಿಸಿದ್ದ ಕೊಲತ್ತೂರು TVK ಶಾಸಕ ವಿ.ಎಸ್ ಬಾಬು ನಿಧನ2 ತಿಂಗಳಿನಿಂದ ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮಧ್ಯಾಹ್ನ 2.24ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಅಕ್ವಾನ್ ಚಂಡಮಾರುತ: ಆಂಧ್ರಪ್ರದೇಶದ 80 ಮೀನುಗಾರರು ಒಡಿಶಾದ ಗಂಜಾಂನಲ್ಲಿ ಸಿಲುಕಿ ಆತಂಕ; ನವೆಂಬರ್ 21ರವರೆಗೆ ಎಚ್ಚರಿಕೆ!ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಅಕ್ವಾನ್ ಚಂಡಮಾರುತದ ಭೀಕರ ಪರಿಣಾಮ ಆಂಧ್ರಪ್ರದೇಶದ ಕಾಕಿನಾಡದ ಸುಮಾರು 80 ಮೀನುಗಾರರು ತಮ್ಮ 10 ಯಾಂತ್ರಿಕೃತ ದೋಣಿಗಳೊಂದಿಗೆ ಆಶ್ರಯ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಗತಪಾತಕಿ ದಾವೂದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!ಭೆಂಡಿ ಬಜಾರ್ ಪ್ರದೇಶದ ಪಾಕ್ಮೋಡಿಯಾ ಬೀದಿಯಲ್ಲಿರುವ ಈ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವುದರಿಂದ ಮತ್ತು ಪುನರಾಭಿವೃದ್ಧಿ (redevelopment) ಅಗತ್ಯವಿರುವುದರಿಂದ ಇದನ್ನು ಕೆಡವಲಾಗುತ್ತಿದೆ.
ಅಖಿಲೇಶ್ ಯಾದವ್ ರ್ಯಾಲಿಯಲ್ಲಿ ಬುಲ್ಡೋಜರ್ ಡಿಕ್ಕಿ: ಯುಪಿ ಬಿಜೆಪಿ ನಾಯಕನ ಪುತ್ರ ದುರ್ಮರಣಅಖಿಲೇಶ್ ಯಾದವ್ ಅವರ ಬೆಂಗಾವಲು ಪಡೆ ಮುಂದೆ ಸಾಗಿದ್ದಾಗ, ವೇಗವಾಗಿ ಬಂದ ಬುಲ್ಡೋಜರ್ ತನ್ನ ಮಗನಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಎಂದು ಅವರು ಆರೋಪಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಆರ್ಯವರ್ಧನ್ ರಸ್ತೆ ವಿಭಜಕಕ್ಕೆ ಅಪ್ಪಳಿಸಿ ಬಿದ್ದ.
ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿಬಡತನದಿಂದ ಹೊರಬಂದವರಲ್ಲಿ ಹಲವರು ಶಿಸ್ತುಬದ್ಧವಲ್ಲದ ಖರ್ಚಿನ ಕಾರಣದಿಂದ ಮತ್ತೆ ಬಡತನಕ್ಕೆ ಜಾರುವ ಅಪಾಯವಿದೆ ಎಂಬ ಕಳವಳದಿಂದ ಪ್ರಧಾನಿ ಉಳಿತಾಯಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ.
ಖುಲಾಸೆಯಾದರೂ 7 ವರ್ಷ ಜೈಲುವಾಸ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್; ಸಂತ್ರಸ್ತನಿಗೆ ₹30 ಲಕ್ಷ ಪರಿಹಾರ ನೀಡಲು ಆದೇಶಕೊಲೆ ಪ್ರಕರಣವೊಂದರಲ್ಲಿ ಹೈಕೋರ್ಟ್ನಿಂದ ಖುಲಾಸೆಯಾದ ನಂತರವೂ 7 ವರ್ಷ 3 ತಿಂಗಳ ಕಾಲ ಅನಗತ್ಯವಾಗಿ ಜೈಲುವಾಸ ಅನುಭವಿಸಿದ ಛತ್ತೀಸ್ಗಢದ ದೇವಿಲಾಲ್ ಗೊಂಡ್ ಅವರಿಗೆ 30 ಲಕ್ಷ ರೂ. ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆ ಕುರಿತ ವರದಿ ಇಲ್ಲಿದೆ:
ಟಿವಿ, ಫ್ಯಾನ್ ಬಿಡಿ ಗುಡಿಸಲಲ್ಲಿ ಕರೆಂಟೇ ಇಲ್ಲ, ಆದರೂ ₹1.39 ಲಕ್ಷ ಬಿಲ್! ಹಣ ಕಟ್ಟದಿದ್ದರೆ ಜೈಲು ಶಿಕ್ಷೆಯ ಬೆದರಿಕೆ; ನಲುಗಿದ ಆದಿವಾಸಿ ವೃದ್ಧ!ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಬೆಹೆರಿಯಾ ಸಾನಿ ಗ್ರಾಮದ 75 ವರ್ಷದ ಬುಡಕಟ್ಟು ವೃದ್ಧ ದುಲಿಚಂದ್ ಅವರ ಗುಡಿಸಲಿಗೆ ವಿದ್ಯುತ್ ಕಂಪನಿಯು ₹1,39,232 ಮೊತ್ತದ ಬಾಕಿ ವಿದ್ಯುತ್ ಬಿಲ್ ಮತ್ತು ವಸೂಲಿ ನೋಟಿಸ್ ಜಾರಿಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:
SP ನಾಯಕ ಅಜಂ ಖಾನ್ಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್: ಮಧ್ಯಂತರ ಜಾಮೀನಿಗೆ ತಡೆ ನೀಡಲು ನಕಾರ!ಖಾನ್ ಅವರು ಸ್ಥಾಪಿಸಿರುವ ಮತ್ತು ನಿಯಂತ್ರಿಸುತ್ತಿರುವ 'ಮೌಲಾನಾ ಮೊಹಮ್ಮದ್ ಅಲಿ ಜೌಹರ್ ಟ್ರಸ್ಟ್'ಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ.
GTA 6 ಮತ್ತು GTA 5 ಹೋಲಿಕೆ ಮೂಲಕ ಭಾರತದ ಅಭಿವೃದ್ಧಿ ಹೋಲಿಕೆ ಮಾಡಿದ ಪ್ರಧಾನಿ ಮೋದಿ; ಕಾಂಗ್ರೆಸ್ ವ್ಯಂಗ್ಯಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಮೋದಿ, “ಭಾರತ ಈಗ ಸಂಪೂರ್ಣ ಹೊಸ ಆಟ ಶುರುಮಾಡಿದೆ” ಎಂದು ಬರೆದುಕೊಂಡಿದ್ದು, 'ಜಿಟಿಎ 5 ಮತ್ತು 6ರ ನಡುವಿನ ಅವಧಿಯಲ್ಲಿ ಭಾರತದ ಬದಲಾವಣೆ ಹೇಗಿದೆ' ಎಂಬ ಶೀರ್ಷಿಕೆಯಡಿ 10 ಸ್ಲೈಡ್ಗಳನ್ನು ಹಂಚಿಕೊಂಡಿದ್ದಾರೆ.
ಕೇಂದ್ರದ ಸಬ್ಸಿಡಿ ಮುಗಿಯುತ್ತಿದ್ದಂತೆ ಕೈಕೊಟ್ಟ ವಿಮಾನಯಾನ ಸಂಸ್ಥೆಗಳು: ದೇಶದ 14 Udan airport ಬಂದ್; ವಿಮಾನ ಸೇವೆ ಸ್ಥಗಿತ!ದೇಶದ ಹಲವು ವಿಮಾನ ನಿಲ್ದಾಣಗಳಲ್ಲಿ ಉಡಾನ್ ಯೋಜನೆಯಡಿ ವಿಮಾನ ಹಾರಾಟವೇ ನಡೆಯುತ್ತಿಲ್ಲ ಎಂಬುದನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) ಒದಗಿಸಿರುವ ಅಂಕಿಅಂಶಗಳು ಬಹಿರಂಗಪಡಿಸಿವೆ.
Video: 'ಇನ್ಮೇಲೆ ನೀರಿಗಾಗಿ ಗಲಾಟೆ ಇರೋಲ್ಲ'; ಕಾವೇರಿ-ಗೋದಾವರಿ ಜೋಡಣೆ ಕುರಿತು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮಹತ್ವದ ಹೇಳಿಕೆ!ಪ್ರವಾಹ ನಿಯಂತ್ರಣ, ಬರಗಾಲ ತಡೆಗಟ್ಟುವುದು ಮತ್ತು ಚೆನ್ನೈಗೆ ಕುಡಿಯುವ ನೀರು ಒದಗಿಸುವ ಬಗ್ಗೆ ಇಬ್ಬರೂ ನಾಯಕರು ಮಾತುಕತೆ ನಡೆಸಿದ್ದಾರೆ. 2027ರ ಮಾರ್ಚ್ ಒಳಗೆ ಪೋಲಾವರಂ ಯೋಜನೆಯನ್ನು ಪೂರ್ಣಗೊಳಿಸುವ ಗುರಿ..
ಮಣಿಪುರಕ್ಕೆ RSS ಮುಖ್ಯಸ್ಥ ಭಾಗವತ್ ಭೇಟಿಯಿಂದ ಪ್ರಯೋಜನವೇನು? ಶಾಂತಿ ಸ್ಥಾಪನೆಗೆ ಕೊಡುಗೆ ಏನು..?: ಕಾಂಗ್ರೆಸ್ ಪ್ರಶ್ನೆಮಣಿಪುರಕ್ಕೆ ಶಾಂತಿ ಬೇಕೇ ಹೊರತು ಕೇವಲ ಸಂಘಟನಾತ್ಮಕ ಸಭೆಗಳಲ್ಲ. ನವೆಂಬರ್ 18ರಿಂದ 20ರವರೆಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಣಿಪುರಕ್ಕೆ ಭೇಟಿ ನೀಡುತ್ತಿರುವುದು ರಾಜ್ಯದಲ್ಲಿ ಮುಂದುವರಿದಿರುವ ಬಿಕ್ಕಟ್ಟಿನ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ