ಭಾರತದ ಮೇಲೆ El Nino ಪರಿಣಾಮ ತೀವ್ರ; ಮಾರ್ಚ್ ವೇಳೆಗೆ 55,000 ಸಾವು ಸಾಧ್ಯತೆ: ಮುನ್ಸೂಚನೆ'ಎಲ್ ನಿನೋ ಹೀಟ್ ಮಾರ್ಟಾಲಿಟಿ ಟ್ರ್ಯಾಕರ್' (El Nino Heat Mortality Tracker) ಪ್ರಕಾರ, ಮುಂದಿನ ಆರು ತಿಂಗಳುಗಳಲ್ಲಿ 3,73,000ಕ್ಕೂ ಹೆಚ್ಚು ಹೆಚ್ಚುವರಿ ಸಾವುಗಳು ಸಂಭವಿಸುವ ಸಾಧ್ಯತೆಯಿದೆ.
ಗೋಹತ್ಯೆ ಮಾಡಿದ್ದ ಮೂವರಿಗೆ ಜೀವಾವಧಿ ಶಿಕ್ಷೆ; ತೀರ್ಪು ಪ್ರಕಟಿಸುವಾಗ ವೇದ, ಮನುಸ್ಮೃತಿ ಉಲ್ಲೇಖಿಸಿದ ಗುಜರಾತ್ ಕೋರ್ಟ್!ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ರಜಪೂತ್ ಅವರು, ವಸೀಮ್ ಖುರೇಶಿ, ಮೊಹಮ್ಮದ್ ರಫೀಕ್ ಖುರೇಶಿ ಮತ್ತು ಅಸ್ಫಾಕ್ ಬಹೇಲಿಮ್ ಎಂಬ ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ 3 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
EDಯಿಂದ ಅಜಮ್ ಖಾನ್ ಮಾಲೀಕತ್ವದ, 1,170 ಕೋಟಿ ರೂ ಮೌಲ್ಯದ ಜೌಹರ್ ವಿಶ್ವವಿದ್ಯಾಲಯದ ಆಸ್ತಿ ಜಪ್ತಿ!ಸಾರ್ವಜನಿಕ ಕಾಮಗಾರಿಗಳಿಗಾಗಿ ಮೀಸಲಾದ ಸರ್ಕಾರಿ ಹಣವನ್ನು ಈ ಖಾಸಗಿ ವಿಶ್ವವಿದ್ಯಾಲಯದ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಆರೋಪಿಸಿದೆ.
CEC ವಿರುದ್ಧ ಇಂಡಿಯಾ ಒಕ್ಕೂಟದಿಂದ 'ಸಾರ್ವಜನಿಕ ದೋಷಾರೋಪಣೆ': ಮಾಜಿ ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಧ್ಯಕ್ಷತೆ!ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ದೋಷಾರೋಪಣೆಯ ಪ್ರಸ್ತಾವನೆಯನ್ನು ಮಂಡಿಸಲಿದ್ದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಚರ್ಚೆಯನ್ನು ಮುಕ್ತಾಯಗೊಳಿಸಲಿದ್ದಾರೆ.
ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಬಿಗ್ ಶಾಕ್! ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಭಾಗಿಯಾದರೆ ಸರ್ಕಾರಿ ಕೆಲಸವಿಲ್ಲ: ನೇಮಕಾತಿ ನಿಯಮ ಬಿಗಿಗೊಳಿಸಿದ ಯೋಗಿ ಸರ್ಕಾರಉತ್ತರ ಪ್ರದೇಶದಲ್ಲಿ ಹಿಂಸಾತ್ಮಕ ಮಾರ್ಗಗಳ ಮೂಲಕ ಆಡಳಿತ ಬದಲಾವಣೆಗೆ ಕರೆ ನೀಡುವ ಅಥವಾ ಅಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗಗಳನ್ನು ನಿರಾಕರಿಸಲು ಯೋಗಿ ಆದಿತ್ಯನಾಥ್ ಸರ್ಕಾರ ನಿರ್ಧರಿಸಿದೆ. ಆ ಕುರಿತ ವರದಿ ಇಲ್ಲಿದೆ:
ರೈತರ ಶವಗಳನ್ನು ಪ್ರಾಣಿಗಳಿಗೆ ಹಾಕಿ; ಆತ್ಮಹತ್ಯೆ ಮಾಡಿಕೊಂಡ ರೈತರ ಅಂತ್ಯಕ್ರಿಯೆಗೆ ಹೋಗ್ಬೇಡಿ ಎಂದ ಶಿಂಧೆ ಬಣದ ಶಾಸಕ: ಸಂಜಯ್ ಗಾಯಕ್ವಾಡ್ ಹೇಳಿಕೆಗೆ ಭಾರಿ ಆಕ್ರೋಶಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಶಾಸಕ ಸಂಜಯ್ ಗಾಯಕ್ವಾಡ್ ಅವರು, "ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಅಂತ್ಯಕ್ರಿಯೆಗಳಲ್ಲಿ ಯಾರೂ ಭಾಗವಹಿಸಬಾರದು" ಎಂದು ಹೇಳುವ ಮೂಲಕ ತೀವ್ರ ವಿವಾದ ಸೃಷ್ಟಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
'ಲಾಠಿಗಳಿಗೆ ಹೆದರಬೇಡಿ': 'ಇಂಡಿಯಾ' ಮೈತ್ರಿಕೂಟದ 'ದೆಹಲಿ ಚಲೋ' ಮಾರ್ಚ್ನಲ್ಲಿ ಪಾಲ್ಗೊಳ್ಳುವಂತೆ ರಾಹುಲ್ ಗಾಂಧಿ ಕರೆ'ಭಯಪಡುವ ಅಗತ್ಯವಿಲ್ಲ. ರಾಜಕೀಯ ಒಲವು ಏನೇ ಇರಲಿ, ಎಲ್ಲ ವಿದ್ಯಾರ್ಥಿ ಗುಂಪುಗಳೂ ನಮ್ಮೊಂದಿಗೆ ಕೈಜೋಡಿಸಬೇಕೆಂದು ನಾನು ಕೋರುತ್ತೇನೆ' ಎಂದರು.
PNB ಬ್ಯಾಂಕ್ನಲ್ಲಿ ₹35 ಕೋಟಿ ಮಹಾ ವಂಚನೆ: ರೈತರ ಜಮೀನು ಪರಿಹಾರದ ಹಣ ಲೂಟಿ; ಮ್ಯಾನೇಜರ್ ಸೇರಿ ಐವರ ಅಮಾನತು!ಉತ್ತರ ಪ್ರದೇಶದ ಐಚ್ಛರ್ ಗ್ರಾಮದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಅರಿವಿಲ್ಲದೆಯೇ ಅವರ ಖಾತೆಗಳಿಂದ ಕೋಟ್ಯಂತರ ರೂಪಾಯಿ ಹಣ ವರ್ಗಾವಣೆಯಾಗಿರುವ ಭಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:
ಬೇರೆಯವರಿಗೆ ಉಪದೇಶ ನೀಡುವುದು ನಿಲ್ಲಿಸಿ; ವಾರಾಣಸಿ, ನಾಗ್ಪುರ ಬಿಜೆಪಿ ಸೋಲಿನ ಆತ್ಮಾವಲೋಕನ ಮಾಡಿಕೊಳ್ಳಿ: ಪ್ರಧಾನಿ ಮೋದಿಗೆ ಕಾಂಗ್ರೆಸ್ ತಿರುಗೇಟುಕಾಂಗ್ರೆಸ್ ಪಕ್ಷವನ್ನು ಅಣಕಿಸುವುದು ಮತ್ತು ಉಪದೇಶ ನೀಡುವುದನ್ನು ನಿಲ್ಲಿಸಿ, ಜನಸಾಮಾನ್ಯರ ಬೆನ್ನು ಮುರಿಯುತ್ತಿರುವ ಬೆಲೆ ಏರಿಕೆ ಹಾಗೂ ಖಾಸಗಿ ಹೂಡಿಕೆಯ ಕೊರತೆಯಂತಹ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವಂತೆ ಆಗ್ರಹಿಸಿದೆ.
ಅಮೆಜಾನ್ ನಿಂದ ಮತ್ತೆ 250 ಉದ್ಯೋಗ ಕಡಿತ: ಬೆಳ್ಳಂಬೆಳಿಗ್ಗೆ ಉದ್ಯೋಗಿಗಳಿಗೆ ಇ-ಮೇಲ್ ಶಾಕ್!ಅಮೆಜಾನ್ನ ಸಾಧನಗಳ (Devices) ತಂಡ ಜಾಗತಿಕವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಅದರ ಪ್ರಮುಖ ನಾಯಕತ್ವವು ಯುಎಸ್ನಲ್ಲಿದೆ. ಯಾವ ಪ್ರದೇಶದ ಉದ್ಯೋಗಿಗಳ ಮೇಲೆ ಪರಿಣಾಮ ಬೀರಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅರ್ನಾಬ್ ಚಂಡಮಾರುತ ಎಫೆಕ್ಟ್: ಆಂಧ್ರ-ಒಡಿಶಾದಲ್ಲಿ ಅಲ್ಲೋಲ ಕಲ್ಲೋಲ; 6 ಮಂದಿ ಸಾವುಅರ್ನಾಬ್ ಚಂಡಮಾರುತದ ಹೊಡೆತಕ್ಕೆ ಸಿಲುಕಿ ಆಂಧ್ರಪ್ರದೇಶದಲ್ಲಿ ಈವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕರಾವಳಿ ಭಾಗದ ಸುಮಾರು 1 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:
'ನಾಸೀರುದ್ದೀನ್ ಶಾ ಸೈದ್ಧಾಂತಿಕ ಒಲವುಗಳನ್ನು ನಾನು ತಪ್ಪಾಗಿ ಅರ್ಥೈಸಿದ್ದೆ; ಅವರೊಬ್ಬ ಅಪಾಯಕಾರಿ ದಿಮಾಗಿ ನಕ್ಸಲ್, ವಿನಾಶಕಾರಿ ಚಿಂತಕ'ನಾಸೀರುದ್ದೀನ್ ಶಾ ಒಬ್ಬ ಸಾಮಾನ್ಯ ನಟ ಎಂದು ಭಾವಿಸಿ ನಾನು ಅವರನ್ನು ಗೌರವಿಸುತ್ತಿದ್ದೆ ಮತ್ತು ಇಷ್ಟಪಡುತ್ತಿದ್ದೆ. ಆದರೆ ಅವರು ಒಬ್ಬ ಅಪಾಯಕಾರಿ ನಗರ ನಕ್ಸಲ್ ಮತ್ತು ವಿನಾಶಕಾರಿ ಚಿಂತಕ ಎಂದು ನನಗೆ ತಿಳಿದಿರಲಿಲ್ಲ. ಅವರ ನಿಜವಾದ ಸ್ವರೂಪ ನನಗೆ ಬಹಳ ತಡವಾಗಿ ಅರಿವಾಯಿತು
ಟಾಟಾ ವಿವಾದ: ಅಮಿತ್ ಶಾ ಜೊತೆ ಸಭೆ ಏಕೆ? ಸರ್ಕಾರದ 'ಪರಮಾಪ್ತ ಉದ್ಯಮಿ' ಪ್ರವೇಶ ಯಾವಾಗ? ನಿರ್ಮಲಾ ಸೀತಾರಾಮನ್ಗೆ ರಾಹುಲ್ ಗಾಂಧಿ ವ್ಯಂಗ್ಯ ಪ್ರಶ್ನೆ‘ಟಾಟಾ ಸಮೂಹವನ್ನು ಅಪರಾಧಪೂರಿತ ರೀತಿಯಲ್ಲಿ ನಾಶಪಡಿಸಲಾಗುತ್ತಿದೆ. ಆದರೆ, ಈ ಬಗ್ಗೆ ಧ್ವನಿ ಎತ್ತಲು ಯಾವುದೇ ಉದ್ಯಮ ನಾಯಕರು ಧೈರ್ಯ ಮಾಡುತ್ತಿಲ್ಲ’ ಎಂದು ರಾಹುಲ್ ಗಾಂಧಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದರು. ಇದರ ಬೆನ್ನಲ್ಲೇ ಇಬ್ಬರು ನಾಯಕರ ನಡುವೆ ವಾಕ್ಸಮರ ಆರಂಭವಾಯಿತು.
ಸನಾತನ ಧರ್ಮದ ಮೂಲತತ್ವವೇ ನಂಬಿಕೆ; AI- ನಂತರದ ಜಗತ್ತಿನಲ್ಲಿ ಧರ್ಮಕ್ಕೆ ಹೆಚ್ಚು ಮಹತ್ವ: ಶ್ರೀಧರ್ ವೆಂಬು ಭವಿಷ್ಯಆಧುನಿಕತಾವಾದಿಗಳಾಗಿರುವುದು ಮತ್ತು ಧರ್ಮವನ್ನು ತ್ಯಜಿಸುವುದು 'ಜನಸಂಖ್ಯಾತ್ಮಕ ಆತ್ಮಹತ್ಯೆ'ಗೆ ಸಮಾನ ಎಂದು ಪ್ರತಿಪಾದಿಸಿದ್ದಾರೆ. ಹಿಂದಿನ ಪೀಳಿಗೆಯವರು ಕೇವಲ ಆಧ್ಯಾತ್ಮಿಕರಾಗಿರದೆ, ನಿಜವಾದ ನಂಬಿಕೆಯನ್ನು ಹೊಂದಿದ್ದರಿಂದಲೇ ಇಂದಿನ ಆಧುನಿಕ ಸಮಾಜ ಅಸ್ತಿತ್ವದಲ್ಲಿದೆ.
ಎಕ್ಸ್ಪ್ರೆಸ್ವೇನಲ್ಲಿ 120 ಕಿ.ಮೀ ವೇಗದಲ್ಲಿ ವಾಹನ ಚಲಾಯಿಸಿದರೆ ದಂಡವಿಲ್ಲ: ನಿತಿನ್ ಗಡ್ಕರಿ ಮಹತ್ವದ ಘೋಷಣೆ!ಗರಿಷ್ಠ ವೇಗಕ್ಕಿಂತ ಶೇ. 20ರಷ್ಟು ಹೆಚ್ಚು ವೇಗದಲ್ಲಿ ಚಲಾಯಿಸಿದರೂ ಚಲನ್ ಜಾರಿಮಾಡಬಾರದು. ಅದಕ್ಕಿಂತ ಹೆಚ್ಚಿನ ವೇಗ ಮೀರಿದರೆ ಚಲನ್ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ರಾಜ್ಯ'ಆಶಾ ಕಾರ್ಯಕರ್ತೆಯರ ಬೇಡಿಕೆಯಲ್ಲಿ ಏನೂ ತಪ್ಪಿಲ್ಲ': ಸಚಿವ ನರೇಂದ್ರಸ್ವಾಮಿ ಹಗುರ ಹೇಳಿಕೆಗೆ ನಟಿ ರಮ್ಯಾ ಆಕ್ಷೇಪ; Video
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ